ಕಡಬ: ಫೆ.14ರಿಂದ ಫೆ.15ರವರೆಗೆ ನಡೆಯುವ ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ಮಹೋತ್ಸವದ ಗೊನೆ ಮುಹೂರ್ತವು ಫೆ.7ರಂದು 9:23ರ ಮೀನ ಲಗ್ನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರ ಕೆ ಕೃಷ್ಣ ಪ್ರಸಾದ್ ಭಟ್ ಎಡಪತ್ಯ, ದೇವಾಸ್ಥಾನದ ಅರ್ಚಕರಾದ ವಿಕ್ರಾಂತ್ ರಾಜ್, ಆಡಳಿತ ಸಮಿತಿಯ ಅಧ್ಯಕ್ಷ ಚಿದಾನಂದ ಗೌಡ ಪಡೆಜ್ಜಾರು, ಕಾರ್ಯದರ್ಶಿ ಕೇಶವ ಬೇರಿಕೆ, ನಾಗೇಶ್ ಮಾಸ್ತಿ ಮನೆ, ಗಿರಿಯಪ್ಪ ಗೌಡ ಮಜ್ಜಾರು, ನಾರಾಯಣ ದೆಂತಾರು, ವೆಂಕಟ್ರಮಣ ದೇಂತಾರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.