ಪುತ್ತುರು: ಅಕ್ಷಯ ಕಾಲೇಜು ಪುತ್ತೂರು ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತ ಕಲಾ ಸಂಘದ ವತಿಯಿಂದ ನಡೆದ ”ಪ್ರಿನ್ಸ್ ಆಂಡ್ ಪ್ರಿನ್ಸೆಸ್” ಫ್ಯಾಶನ್ ಶೋ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಫೆ.8ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಡಿಸೆಂಬರ್ 01 ರಂದು ನಡೆದ ಮೊದಲ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ 260 ಸ್ಪರ್ಧಾಳುಗಳಲ್ಲಿ ಫಿನಾಲೆಗೆ ಆಯ್ಕೆಯಾದ 80 ಸ್ಪರ್ಧಾಳುಗಳು ಭಾಗವಹಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್ ನೆರವೇರಿಸಿ “ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ನೀಡಿರುವ ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು” ಎಂದರು.
3 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 6 ರಿಂದ 10 ವರ್ಷದ ವಿಭಾಗ, 11 ರಿಂದ 14 ವರ್ಷದ ವಿಭಾಗ ಮತ್ತು 15 ರಿಂದ 18 ವರ್ಷದ ವಿಭಾಗದ ಸ್ಪರ್ಧೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವೇದ ಲಕ್ಷ್ಮೀಕಾಂತ್, GL Acharya Jeweller ಪುತ್ತೂರು ಇವರು ಮಾತನಾಡಿ “ಫ್ಯಾಶನ್ ಕ್ಷೇತ್ರದ ಪ್ರತಿಭೆಯ ಅನಾವರಣಕ್ಕಾಗಿ ಪುತ್ತೂರಿನಲ್ಲಿ ಇಂತಹ ಒಂದು ವೇದಿಕೆಯ ಅಗತ್ಯವಿದ್ದು, ಈ ಅಗತ್ಯವನ್ನು ಅಕ್ಷಯ ಕಾಲೇಜು ಇಂದು ಪೂರೈಸಿದೆ ಎಂದರು” . ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಅಬ್ದುಲ್ ರೆಹಮಾನ್, ಮಾಲಕರು, Adarsh electronics and Furnitures, sampya ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಇವರು ಕಾಲೇಜಿನ ವತಿಯಿಂದ ನೀಡಿದ ಗೌರವವನ್ನು ಸ್ವೀಕರಿಸಿ ಸ್ಪರ್ಧಾಳುಗಳಿಗೆ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ “ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿಯ ಚಟುವಟಿಕೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರವಾಗಿರುತ್ತದೆ, ಈ ನಿಟ್ಟಿನಲ್ಲಿ ಅಕ್ಷಯ ಕಾಲೇಜಿನ ಈ ಪರಿಶ್ರಮ ಶ್ಲಾಘನೀಯ” ಎಂದರು. ನಂತರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವಿಜೇತರು..
6 ರಿಂದ 10 ವಿಭಾಗ:
ಪ್ರಿನ್ಸ್-ರುಶಬ್ ರಾವ್(ವಿನ್ನರ್), ಸಾನ್ವಿತ್ ಎಸ್.ಹೆಗ್ಡೆ(ದ್ವಿ), ಅದ್ವಿಕ್ ಎ(ತೃ), ಪ್ರಿನ್ಸೆಸ್-ಚಾರ್ವಿ ಅಶ್ವಿನ್(ವಿನ್ನರ್), ಕಹಾನಿ ಯೋಗೀಶ್ (ದ್ವಿ), ಅಮೃತಾ ಜೆ.ಅಮೀನ್(ತೃ)
11 ರಿಂದ 14 ವಿಭಾಗ:
ಪ್ರಿನ್ಸ್:ಸುಜನ್ ಕಡಬ(ವಿನ್ನರ್), ತನಯ ಜಾಕೆ ಗೌಡ(ದ್ವಿ), ಗೌತಮ್ ಕೃಷ್ಣ(ತೃ), ಪ್ರಿನ್ಸೆಸ್:ರಕ್ಷಿತಾ ನಾಯರ್(ವಿನ್ನರ್), ಚುಕ್ಕಿ ವಿಠಲ್(ದ್ವಿ), ದಿವಿಕಾ ಕಿರಣ್(ತೃ)
15 ರಿಂದ 18 ವಿಭಾಗ:
ಪ್ರಿನ್ಸ್:ಸ್ಟೆರೀ ಟಾಮ್(ವಿನ್ನರ್), ಸಾರ್ಥಕ್ ಜೆ.ಕೆ(ದ್ವಿ), ಲೋಹಿತ್(ತೃ), ಪ್ರಿನ್ಸೆಸ್:ಸ್ತುಥಿ ಶೆಟ್ಟಿ(ವಿನ್ನರ್), ನಿಶಾ ಸಿ.ಜೆ(ದ್ವಿ), ಬೆನಿಟ ಶೈನಿ ಡಿ’ಸೋಜ(ತೃ)
ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ವಂಡರ್ ಲಾ ವತಿಯಿಂದ ವಿಶೇಷ ಕೂಪನ್ ನೀಡಲಾಯಿತು.ನಂತರ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ವಂಡರ್ ಲಾ ಆಮ್ಯೂಸ್ಮೆಂಟ್ ಪಾರ್ಕ್ ಇದರ ಡೆವಲಪ್ಮೆಂಟ್ ಮ್ಯಾನೇಜರ್ ಸಂತೋಷ್, ಕಾಲೇಜಿನ ಪ್ರಾಂಶುಪಾಲ ಸಂಪತ್. ಕೆ. ಪಕ್ಕಳ. ಕಾಲೇಜಿನ ಆಡಳಿತ ನಿರ್ದೇಶಕ ಅರ್ಪಿತ್.ಟಿ.ಎ, ಉಪ ಪ್ರಾಂಶುಪಾಲರು ರಕ್ಷಣ್. ಟಿ.ಆರ್, ಕಾರ್ಯಕ್ರಮದ ಸಂಯೋಜಕರು ಕಿಶನ್.ಎನ್.ರಾವ್, ಫ್ಯಾಷನ್ ಡಿಸೈನ ವಿಭಾಗದ ಮುಖ್ಯಸ್ಥರು ಅನುಷಾ ಪ್ರವೀಣ್, ಅಧ್ಯಾಪಕ ಅಧ್ಯಾಪಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.