ಪುತ್ತೂರು: ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು. ಫೆ.8 ರಂದು ಬೆಳಿಗ್ಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ವೈದಿಕ ಮಂತ್ರಾಕ್ಷತೆ ನಡೆದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸವಣೂರುಗುತ್ತು ಕುಟುಂಬಸ್ಥರು ಅನ್ನದಾನದ ಸೇವಾಕರ್ತರಾಗಿದ್ದರು.
![](https://puttur.suddinews.com/wp-content/uploads/2025/02/17b67853-cf15-435e-830f-c6efb41ebf1a.jpg)
ದೇವಾಲಯದ ಆಡಳಿತದಾರರಾದ ಸವಣೂರುಗುತ್ತು ಡಾ.ರತ್ನಾಕರ ಶೆಟ್ಟಿ ಮತ್ತು ಕುಟುಂಬಸ್ಥರು, ಆಡಳಿತ ಸಮಿತಿ ಅಧ್ಯಕ್ಷರಾದ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಹೈಕೋರ್ಟ್ ನ್ಯಾಯಾಧೀಶರಾದ ಸವಣೂರುಗುತ್ತು ವಿಶ್ವಜಿತ್ ಶೆಟ್ಟಿ, ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ, ಅರ್ಚಕ ನಾರಾಯಣ ಬಡೆಕಿಲ್ಲಾಯ, ಜ್ಯೋತಿಷಿ ವಿಶ್ವಮೂರ್ತಿ ಬಡೆಕಿಲ್ಲಾಯ, ಜಾತ್ರೋತ್ಸವ ಸಮಿತಿಯ ಕಾರ‍್ಯದರ್ಶಿ ಬೆಳಿಯಪ್ಪ ಗೌಡ ಚೌಕಿಮಠ, ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ಸುಣ್ಣಾಜೆ, ಪ್ರಧಾನ ಕಾರ‍್ಯದರ್ಶಿ ರಾಘುವ ಗೌಡ ಸವಣೂರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಸುಂದರ ರೈ, ಪಿ.ಡಿ.ಕೃಷ್ಣಕುಮಾರ್ ರೈ, ದೇವಸ್ಯ, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಗ್ರಾಮ ದೈವ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಪ್ರಜ್ವಲ್ ಕೆ.ಆರ್ ಕೋಡಿಬೈಲು, ಪುರಂದರ ಬಾರಿಕೆ, ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು ಹಾಗೂ ಊರ-ಪರವೂರ ಭಕ್ತಾಧಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.