ಮುಕ್ರಂಪಾಡಿ ಅಶ್ವತ್ಥಕಟ್ಟೆಯಲ್ಲಿ 53 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

0

ಪುತ್ತೂರು: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ ಇದರ ವತಿಯಿಂದ ನಡೆಯುವ 53 ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆಯು ಫೆ.8 ರಂದು ವೇದಮೂರ್ತಿ ಉದಯನಾರಾಯಣ ಕಲ್ಲೂರಾಯ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮುಕ್ರಂಪಾಡಿ ಸುಭದ್ರ ಸಭಾಭವನದ ಬಳಿಯ ಅಶ್ವತ್ಥ ಕಟ್ಟೆಯಲ್ಲಿ ನಡೆಯಿತು.

ಬೆಳಿಗ್ಗೆ 7 ರಿಂದ ಗಣಹೋಮ, ಅಶ್ವತ್ಥ ನಾರಾಯಣ ಪೂಜೆ, ಸಂಜೆ 6 ರಿಂದ ದೇವತಾ ಪ್ರಾರ್ಥನೆ, ಸುಭದ್ರ ಮಹಿಳಾ ಭಜನಾ ಮಂಡಳಿ ಮುಕ್ರಂಪಾಡಿ ಇವರಿಂದ ಭಜನಾ ಕಾರ್ಯಕ್ರಮ, ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ. ರಾತ್ರಿ 9.30 ರಿಂದ ಬಳಿಕ ದಯಾನಂದ ಕತ್ತಲ್‌ಸಾರ್ ಇವರ ಸಾರಥ್ಯದಲ್ಲಿ ಕ್ಷೇತ್ರ ಪುರಾಣ ಮಂಜರಿ – ಭಕ್ತಿ ಭಾವದ ನೃತ್ಯ ಸಂಗಮ ನಡೆಯಿತು.

ದಯಾನಂದ ಕತ್ತಲ್‌ಸಾರ್ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಸುಡುಮದ್ದು ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here