ಹೊಸಮನೆ ಕ್ರಿಕೆಟರ‍್ಸ್‌ನ ‘ಆರ್ಯಾಪು ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟ ಸಂಪನ್ನ

0

ಹೆಸರಾಂತ ಗಾಯಕರ ಸಮಾಗಮದೊಂದಿಗೆ ಮೇಳೈಸಿದ ಆರ್ಯಾಪು ಮ್ಯೂಸಿಕಲ್ ನೈಟ್

ಪುತ್ತೂರು: ಹೊಸಮನೆ ಕ್ರಿಕೆಟರ್ಸ್ ನಿಂದ ಆರ್ಯಾಪು ಇದರ ವತಿಯಿಂದ ಎರಡು ದಿನಗಳ ಕಾಲ ಕಾರ್ಪಾಡಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಆರ್ಯಾಪು ಗ್ರಾಮದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ನಡೆದ 10 ತಂಡಗಳ ಕ್ರಿಕೆಟ್ ಪಂದ್ಯಾಟ ‘ಆರ್ಯಾಪು ಪ್ರೀಮಿಯರ್ ಲೀಗ್ ಸೀಸನ್-1’ ಫೆ.9ರಂದು ರಾತ್ರಿ ಝೀ ಕನ್ನಡ ಮತ್ತು ಕಲರ‍್ಸ್ ಕನ್ನಡದ ಕರ್ನಾಟಕದ ಹೆಸರಾಂತ ಗಾಯಕರ ಸಮಾಗಮದೊಂದಿಗೆ ಮೇಳೈಸಿದ ‘ಆರ್ಯಾಪು ಮ್ಯೂಸಿಕಲ್ ನೈಟ್‌ನೊಂದಿಗೆ ಸಂಪನ್ನಗೊಂಡಿತು.


ಲೀಗ್ ಪಂದ್ಯಾಟದಲ್ಲಿ ಡಾ.ಸುರೇಶ್ ಪುತ್ತೂರಾಯ ಮಾಲಕತ್ವದ ಟೀಮ್ ವಿಷ್ಣುಮೂರ್ತಿ ಸಂಪ್ಯ, ಗಂಗಾಧರ ಅಮೀನ್ ಹೊಸಮನೆ ಮಾಲಕತ್ವದ ಹೊಸಮನೆ ಕ್ರಿಕೆಟರ‍್ಸ್, ಜಯಂತ ಶೆಟ್ಟಿ ಮಾಲಕತ್ವದ ಟೀಮ್ ರತ್ನಶ್ರೀ ಪುತ್ತೂರು, ನಿತಿನ್ ಪಕ್ಕಳ ಮಾಲಕತ್ವದ ಶ್ರೀದತ್ತ ಕ್ರಿಕೆಟರ‍್ಸ್, ಪ್ರೀತಂ ಮೇರ್ಲ ಮಾಲಕತ್ವದ ಟೀಮ್ ಎಸ್‌ಕೆಸಿ, ಬಾಲಚಂದ್ರ ಗೌಡ ಮಾಲಕತ್ವದ ಟೀಮ್ ಕಾರ್ಪಾಡಿ, ಶರತ್ ಆಳ್ವ ಮಾಲಕತ್ವದ ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಪುತ್ತೂರು, ಸಂತೋಷ್ ಸುವರ್ಣ ಮೇರ್ಲ ಮಾಲಕತ್ವದ ಆರ್ಯನ್ ಮೋನ್‌ಸ್ಟಾರ್ ಮೇರ್ಲ, ಸುರೇಶ್ ಪೆಲತ್ತಡಿ ಮಾಲಕತ್ವದ ಸ್ವರ್ಣ ಸ್ಟ್ರೈಕರ‍್ಸ್ ಹಾಗೂ ನರೇಂದ್ರ ನಾಯಕ್ ಮಾಲಕತ್ವದ ಮರಕ್ಕ ಚಾಲೆಂಜರ‍್ಸ್ ಪಂದ್ಯಾಟದಲ್ಲಿ ಭಾಗವಹಿಸಿದ್ದವು.


ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ವಿನ್ನರ್, ಎಸ್‌ಕೆಸಿ ರನ್ನರ್:
ಎರಡು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ಶರತ್ ಆಳ್ವ ಕೂರೇಲು ಶರತ್ ಆಳ್ವ ಮಾಲಕತ್ವದ ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಪುತ್ತೂರು ಚಾಂಪಿಯನ್ ಪಡೆದು ರೂ.25,೦೦೦ ನಗದು ಹಾಗೂ ಎಪಿಎಲ್ ಟ್ರೋಫಿಯನ್ನು ಪಡೆದುಕೊಂಡಿದೆ. ಪ್ರೀತಂ ಮೇರ್ಲ ಮಾಲಕತ್ವದ ಟೀಮ್ ಎಸ್‌ಕೆಸಿ ದ್ವಿತೀಯ ಸ್ಥಾನ ಪಡೆದು ರೂ.15 ಸಾವಿರ ನಗದು ಹಾಗೂ ಎಪಿಎಲ್ ಟ್ರೋಫಿಯನ್ನು ಪಡೆದುಕೊಂಡಿದೆ. ಸುರೇಶ್ ಪೆಲತ್ತಡಿ ಮ್ಹಾಲಕತ್ವದ ಸ್ವರ್ಣ ಸ್ಟ್ರೈಕರ‍್ಸ್(ತೃ), ಜಯಂತ ಶೆಟ್ಟಿ ಕಂಬಳತ್ತಡ್ಡ ಮ್ಹಾಲಕತ್ವದ ಟೀಮ್ ರತ್ನಶ್ರೀ(ಚ)ಸ್ಥಾನ ಪಡೆದುಕೊಂಡಿದೆ. ಎಸ್‌ಕೆಸಿ ತಂಡ ಸುನಿಲ್ ಸರಣಿ ಶ್ರೇಷ್ಠ, ಸೆವೆನ್ ಡೈಮಂಡ್ಸ್ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್‌ನ ಲೋಹಿತ್ ಉತ್ತಮ ದಾಂಡಿಗ, ಪ್ರಶಾಂತ್ ಉತ್ತಮ ಎಸೆರಗಾರ, ಪ್ರಮೋದ್ ಕ್ಷೇತ್ರ ರಕ್ಷಕ ಹಾಗೂ ಎಸ್‌ಕೆಯ ಶ್ರವನ್ ಎಮರ್ಜೆನ್ಸಿ ಪ್ಲೆಯರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಪ್ರತಿ ಪಂದ್ಯಾಟದಲ್ಲಿಯೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿತ್ತು.


ಸಮಾರೋಪ ಸಮಾರಂಭ:
ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಫೆ.9ರಂದು ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಯುವ ಉದ್ಯಮಿ ಸಹಜ್ ರೈ ಉದ್ಘಾಟಿಸಿದರು. ಸಂಪ್ಯ ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ನಗರ ಸಭಾ ಸ್ಥಾಯಿ ಸಮಿತಿ ಸದಸ್ಯ ಸುಂದರ ಪೂಜಾರಿ ಬಡಾವು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪಾಣಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯ ಬಿ.ಎಸ್., ವಿದ್ಯಾಧರ ಜೈನ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಹಿರಿಯರಾದ ಮಂಜಪ್ಪ ರೈ ಬಾರಿಕೆ, ಧನಂಜಯ ಶೆಟಿ ಮೇರ್ಲ, ಹೊಟೇಲ್ ಉದ್ಯಮಿ ಜಯಂತ ಶೆಟ್ಟಿ ಕಂಬಳತ್ತಡ್ಡ, ಚಲನ ಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಬೂಡಿಯಾರು ಹೊಸಮನೆ ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ವಾಸುಕಿ ಶಾಮಿಯಾನದ ದಿನೇಶ್, ಕಟೀಲ್ ಲಾಜಿಸ್ಟಿಕ್‌ನ ಜನಾರ್ದನ ಪದಡ್ಕ, ತಾರಾನಾಥ ಸುವರ್ಣ ಮೇರ್ಲ, ಅಮಿತ್ ಕಲ್ಲಡ್ಕ, ಗಂಗಾದರ ಕಲ್ಲಡ್ಕ, ಉಮೇಶ್ ಶೆಟ್ಟಿ ಬೈಲಾಡಿ, ಹೊಸಮನೆ ಕ್ರಿಕೆಟರ‍್ಸ್‌ನ ಅಧ್ಯಕ್ಷ ಧನುಷ್ ಹೊಸಮನೆ ಹಾಗೂ 10 ತಂಡಗಳ ಮ್ಹಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.


ಸನ್ಮಾನ:
ಆರ್ಯಾಪು ಗ್ರಾಮ ಪಂಚಾಯತ್ ಸ್ವಚ್ಚತಾ ವಾಹನದ ಚಾಲಕಿ ಶಕುಂತಳಾರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಹೊಸಮನೆ ಕ್ರಿಕೆಟರ‍್ಸ್‌ನ ಪ್ರಧಾನ ಕಾರ್ಯದರ್ಶಿ ಪವನ್ ಶೆಟ್ಟಿ ಕಂಬಳತ್ತಡ್ಕ ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ್ ಎಸ್.ಕೆ ವಂದಿಸಿದರು. ಶ್ರೇಯಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಮೇಳೈಸಿದ ಆರ್ಯಾಪು ಮ್ಯೂಸಿಕಲ್ ನೈಟ್;
ಪ್ರಥಮ ಬಾರಿಗೆ ಆರ್ಯಾಪಿನಲ್ಲಿ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವನ್ನು ಆಯೋಜನೆಯೊಂದಿಗೆ ಆರ್ಯಾಪುನಲ್ಲಿ ಪ್ರಥಮ ಬಾರಿಗೆ ನಡೆದ ಮ್ಯೂಸಿಕಲ್ ನೈಟ್ ಕಾರ್ಯಕ್ರಮವು ಮೇಳೈಸಿದೆ. ತುಳು ಚಲನ ಚಿತ್ರ ನಟರಾದ ವಿನೀತ್, ಸಮತಾ ಅಮೀನ್ ವಿಶೇಷ ಆಕರ್ಷಣೆಯಾಗಿದ್ದರು. ಝೀ ಕನ್ನಡದ ಸರಿಗಮಪ ಖ್ಯಾತಿಯ ಶರದಿ ಪಾಟೀಲ್, ಪಲ್ಲವಿ ಪ್ರಭು, ರಜತ್ ಮಯ್ಯ, ಕಲರ‍್ಸ್ ಕನ್ನಡದ ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಗಾಯನದೊಂದಿಗೆ ಖ್ಯಾತ ಹಿನ್ನೆಲೆ ಸಂಗೀತಗಾರರಾದ ರಿಧಂನಲ್ಲಿ ವಿನಯ್ ರಂಗದೋಲ್, ಲೀಡ್ ಗಿಟಾರ್‌ನಲ್ಲಿ ರೋಷನ್, ಕೀಬೋರ್ಡ್‌ನಲ್ಲಿ ಅರುಣ್ ರಾಯ್, ಬಾಸ್ ಗಿಟಾರ್‌ನಲ್ಲಿ ಪ್ರದೀಪ್ ಕಿಗ್ಗಲ್, ತಬಲದಲ್ಲಿ ಆತ್ಮರಾಮ್, ಡ್ರಮ್‌ವಾದನದಲ್ಲಿ ರೋಷನ್ ಸಂಗೀತ ರಸದೌತನ, ಶಿವಂ ಡ್ಯಾನ್ಸ್ ಅಕಾಡೆಮಿಯಿಂದ ವಿನೂತನ ಶೈಲಿಯ ಡ್ಯಾನ್ಸ್, ಶ್ರೀಜಿತ್ ಸರಳಾಯರವರ ವಯಲಿನ್ ವಾದನದೊಂದಿಗೆ ಶ್ರೀಗುರು ಚೆಂಡೆ ಸದ್ದಿನ ಝೇಂಕಾರ ಹಾಗೂ ಶ್ರೇಯಸ್ ಶೆಟ್ಟಿಯವರ ನಿರೂಪಣೆಯೊಂದಿಗೆ ಮೇಳೈಸಿದ ಆರ್ಯಾಪು ಮ್ಯೂಸಿಕಲ್ ನೈಟ್ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೋರೆಗೊಳಿಸಿತು. ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಚಿತ್ರ ತಂಡ ಹಾಗೂ ಮೀರಾ ಚಿತ್ರದ ನಿರ್ಮಾಪಕ ಲಂಚ್‌ಲಾಲ್ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿದ್ದರು.

LEAVE A REPLY

Please enter your comment!
Please enter your name here