ರಾಮಕ್ಕ ರೈ ಸೂಡಿಮುಳ್ಳು ನಿಧನ

0

ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸೂಡಿಮುಳ್ಳು ನಿವಾಸಿ ರಾಮಕ್ಕ ರೈ( 90 ವ) ಫೆ.9 ರಂದು ರಾತ್ರಿ ತಮ್ಮ ಸೃಗೃಹದಲ್ಲಿ ನಿಧನರಾದರು. ಮೃತರ ಅಂತ್ಯ ಸಂಸ್ಕಾರವು ಫೆ.10 ರಂದು ಬೆಳಿಗ್ಗೆ ನಡೆಯಿತು.

ಮೃತರು ಮಕ್ಕಳಾದ ಗಣೇಶ್ ರೈ ಸೂಡಿಮುಳ್ಳು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ‍್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮತ್ತು ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.


ಮೃತರ ಮನೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ‍್ಯದರ್ಶಿ ರಾಕೇಶ್ ರೈ ಕೆಡೆಂಜಿ, ಗಿರಿಶಂಕರ್ ಸುಲಾಯ ದೇವಸ್ಯ, ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಂಬಿಲ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ ಹಾಗೂ ಸದಸ್ಯರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ನಿರ್ದೇಶಕ ಪ್ರಕಾಶ್ ರೈ ಸಾರಕರೆ, ಪುತ್ತೂರು ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ಪಿ.ಡಿ.ಗಂಗಾಧರ ರೈ ದೇವಸ್ಯ, ಅರಿಯಡ್ಕ ಕೃಷ್ಣ ರೈ ತಳಮನೆ ಪುಣ್ಚಪ್ಪಾಡಿ, ಪ್ರಭಾಕರ್ ಶೆಟ್ಟಿ ನಡುಬೈಲು,ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಸವಣೂರು, ಮೋಹನ್ ರೈ ಕೆರೆಕೋಡಿ, ಮೋಹನ್ ದೇವಾಡಿಗ ಸಹಿತ ನೂರಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here