ಪುತ್ತೂರು: ಕರ್ನಾಟಕ ಮುಸ್ಲಿಂ ಜಮಾಅತ್ ಕೊಳ್ತಿಗೆ ಶಾಖೆಯ ಮಹಾಸಭೆ ಹಂಝತುಲ್ಲತೀಫಿಯ್ಯಿ ಬಾಯಂಬಾಡಿರವರ ಮನೆಯಲ್ಲಿ ಝೈನುದ್ದೀನ್ ಹಾಜಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಬೂಬಕರ್ ಸಖಾಫಿ ಕೊಳ್ತಿಗೆ ಉದ್ಘಾಟಿಸಿದರು. ಎಸ್ವೈಎಸ್ ಮಾಡಾವು ಸರ್ಕಲ್ ಅಧ್ಯಕ್ಷ ಬದ್ರುಲ್ ಮುನೀರ್ ಹನೀಫಿ ಮಾತನಾಡಿದರು. ಶಾಖೆಯ ನೂತನ ಸಮಿತಿಯನ್ನು ಕೆಎಂಜೆ ಮಾಡಾವು ಸರ್ಕಲ್ ಅಧ್ಯಕ್ಷ ಅಬೂಬಕರ್ ಎಂ. ಎಂ. ಹಾಗೂ ಆರ್.ಓ ಇಬ್ರಾಹಿಂ ಹಾಜಿ ನೇತೃತ್ವದಲ್ಲಿ ರಚಿಸಲಾಯಿತು. ಅಧ್ಯಕ್ಷರಾಗಿ ಪುತ್ತುಂಞಿ ಹಾಜಿ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಫಕ್ರುದ್ದೀನ್ ನೀಟಡ್ಕ, ಕೋಶಾಧಿಕಾರಿಯಾಗಿ ಎನ್ ಎಂ ಅಬ್ದುಲ್ ರಹಿಮಾನ್ ಆಯ್ಕೆಯಾದರು. ದಅವಾ ಕಾರ್ಯದರ್ಶಿಯಾಗಿ ರಮ್ಲಾನ್ ಬಿ, ವಾರ್ತಾ ಕಾರ್ಯದರ್ಶಿಯಾಗಿ ಮಹಮ್ಮದ್ ಬಾಯಂಬಾಡಿ, ಇಸಾಬ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಕೆ, ಸಹಾಯ್ ಕಾರ್ಯದರ್ಶಿಯಾಗಿ ಝೈನುದ್ದೀನ್ ಹಾಜಿ, ಸಂಘಟನಾ ಕಾರ್ಯದರ್ಶಿಯಾಗಿ ಹಂಝ ಲತೀಫಿ ಬಾಯಂಬಾಡಿ ಆಯ್ಕೆಯಾದರು.
ಸದಸ್ಯರುಗಳಾಗಿ ಹಸೈನಾರ್ ಕುಂಡಡ್ಕ, ಶಾಫಿ ಕೆ ಎಚ್, ರಮ್ಲಾನ್ ಹಾಜಿ, ಮಹಮ್ಮದ್ ಪಡ್ಪು, ಅಬ್ಬಾಸ್ ಮೊಗಪ್ಪೆ, ಹಸನ್ ಕುಂಞಿ, ಅಬ್ದುಲ್ಲ ಎನ್, ಕುಂಞಿ ಅಹ್ಮದ್, ಇಸ್ಮಾಯಿಲ್ ಎನ್, ಅಬ್ದುಲ್ಲ ಎಂ, ಅಹ್ಮದ್ ಕುಂಡಡ್ಕ, ಅಬ್ದುಲ್ ಮುತ್ತಲಿಬ್ ಆಯ್ಕೆಯಾದರು.
ಸರ್ಕಲ್ ಕೌನ್ಸಿಲರ್ಗಳಾಗಿ ಅಬ್ದುಲ್ ರಹಿಮಾನ್ ಕೆ, ಹಸೈನಾರ್ ಕೆ, ಶಾಫಿ ಕೆ ಎಚ್ ಆಯ್ಕೆಯಾದರು. ಹಂಝ ಲತ್ವೀಫಿ ಉಸ್ತಾದ್ ಸ್ವಾಗತಿಸಿದರು. ಮುಹಮ್ಮದ್ ಬಾಯಂಬಾಡಿ ವಂದಿಸಿದರು.