ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ಎಸ್‌ವೈಎಸ್) ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್(ಕೆಎಂಜೆ) ಕೊಳ್ತಿಗೆ ಶಾಖೆಯ ಮಹಾಸಭೆ ಹಂಝತುಲ್ಲತೀಫಿಯ್ಯಿ ಬಾಯಂಬಾಡಿ ರವರ ನಿವಾಸದಲ್ಲಿ ಝೈನುದ್ದೀನ್ ಹಾಜಿರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಬೂಬಕರ್ ಸಖಾಪಿ ಕೊಳ್ತಿಗೆ ಉದ್ಘಾಟಿಸಿ ಶುಭ ಹಾರೈಸಿದರು. ಎಸ್‌ವೈಎಸ್ ಮಾಡಾವು ಸರ್ಕಲ್ ಅಧ್ಯಕ್ಷ ಬದ್ರುಲ್ ಮುನೀರ್ ಹನೀಫಿ ಸಂದರ್ಭೋಚಿತವಾಗಿ ಮಾತನಾಡಿದರು. ಆರ್.ಓ ಫವಾಝ್ ಕಟ್ಟತ್ತಾರುರವರ ನಿರ್ದೇಶನದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಶರೀಫ್ ಬಾಯಂಬಾಡಿ, ಉಪಾಧ್ಯಕ್ಷರಾಗಿ ಹಂಝತುಲ್ಲತೀಫಿಯ್ಯಿ ಬಾಯಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಬಶೀರ್ ಕೆಮ್ಮಾರ, ಕೋಶಾಧಿಕಾರಿಯಾಗಿ ಅಬೂಬಕರ್ ಸಖಾಪಿ ಕೊಳ್ತಿಗೆ ಆಯ್ಕೆಯಾದರು. ದಅವಾ ಮತ್ತು ಟ್ರೈನಿಂಗ್ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್, ಸಾಂತ್ವನ ಮತ್ತು ಇಸಾಬ ಕಾರ್ಯದರ್ಶಿಯಾಗಿ ಶಾಹುಲ್ ಹಮೀದ್ ಅಮಳ, ಸರ್ಕಲ್ ಕೌನ್ಸಿಲರ್‌ಗಳಾಗಿ ಅಬ್ದುಲ್ ಲತೀಫ್, ಶಾಹುಲ್ ಹಮೀದ್ ಆಯ್ಕೆಯಾದರು. ಹಂಝ ಲತ್ವೀಫಿ ಉಸ್ತಾದ್ ಸ್ವಾಗತಿಸಿದರು. ಮುಹಮ್ಮದ್ ಬಾಯಂಬಾಡಿ ವಂದಿಸಿದರು.