ಪುತ್ತೂರು: “ಕರ್ಮಲ ಜಾತ್ರೆ” ಯೆಂದೇ ಪ್ರಸಿದ್ಧವಾದ ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.22 ಮತ್ತು 23ರಂದು ನಡೆಯುವ ಜಾತ್ರೋತ್ಸವದ ಅಂಗವಾಗಿ ಫೆ.15ರಂದು ಗೊನೆ ಮುಹೂರ್ತ ನಡೆಯಿತು.
ದೇವಸ್ಥಾನದ ಗೌರವಾಧ್ಯಕ್ಷ ಚಂದ್ರಹಾಸ ರೈ ಬಾಳಿಕೆ ಅವರ ತೋಟದಲ್ಲಿ ಗೊನೆ ಮುಹೂರ್ತ ನೆರವೇರಿಸಲಾಯಿತು. ದೇವಸ್ಥಾನದ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ, ಧರ್ಮದರ್ಶೀ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಗಣೇಶ್ ಕರ್ಮಲ, ಗಣೇಶ ರೈ, ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕರ್ಮಲ, ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ, ಉಪಾಧ್ಯಕ್ಷ ಮಾಹಾಲಿಂಗ ಪಾಟಾಳಿ, ಕೋಶಾಧಿಕಾರಿ ದಿನೇಶ ಕರ್ಮಲ, ತಾರನಾಥ, ಕೃಷ್ಣಪ್ಪ ಅಶೋಕ ಮೊದಲಾದವರು ಉಪಸ್ಥಿತರಿದ್ದರು.