




ಪುತ್ತೂರು: ಉದ್ಯಮಶೀಲತೆಯ ಕನಸನ್ನು ನನಸಾಗಿಸಲು ನಿಟ್ಟೆ ಇನ್ ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜ್ಯುಕೇಶನ್, ಎಐಸಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್, ಸುದ್ದಿ ಅರಿವು ಕೇಂದ್ರ (ಸುದ್ದಿ ಮಾಹಿತಿ ಟ್ರಸ್ಟ್) ಪುತ್ತೂರು ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನೇತೃತ್ವದಲ್ಲಿ ಉದ್ಯಮಶೀಲತ ಅಭಿವೃದ್ಧಿ ಕಾರ್ಯಕ್ರಮ ಎಂಎಸ್‌ಎಂಇ ಮತ್ತು ಸ್ಟಾರ್ಟ್ ಅಪ್ ಬೂಟ್ ಕ್ಯಾಂಪ್ 2025 ಕಾರ್ಯಕ್ರಮದ ಉದ್ಘಾಟನೆ ಇಂದು(ಡಿ.15ರಂದು) ನಡೆಯಿತು. ಕಾರ್ಯಕ್ರಮವು ಇಂದು ಮತ್ತು ನಾಳೆ ( ಡಿ.16) ಮಂಗಳೂರಿನ ಪಡೀಲ್ ಕ್ಯಾಂಪಸ್‌ನಲ್ಲಿರುವ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜ್ಯುಕೇಶನ್‌ನಲ್ಲಿ ನಡೆಯಲಿದೆ.



ನಿಟ್ಟೆ ಯುನಿವರ್ಸಿಟಿಯ ಉಪ ಕುಲಪತಿ ಡಾ| ಎಂ ಎಸ್ ಮೂಡಿತ್ತಾಯ ಉದ್ಘಾಟಿಸಿದರು. ಅತಿಥಿಗಳಾಗಿ ಮಂಗಳೂರಿನ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಇದರ ನಿರ್ದೆಶಕ ರವೀಂದ್ರ ಆರೂರು, ಇಸಿಆರ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಅಧ್ಯಕ್ಷ ಮಧು ಟಿ. ಭಾಸ್ಕರನ್, ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ ಶಿವಾನಂದ ಭಾಗವಹಿಸಿದರು.





ಡಿ.16ರಂದು ಸಂಜೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಕೆಸಿಸಿಐ ಅಧ್ಯಕ್ಷ ಪಿ.ಬಿ ಅಮ್ಮದ್ ಮುದಸೀರ್, ನಿಟ್ಟೆ ಟೆಕ್ನಿಕಲ್ ಎಜ್ಯುಕೇಶನ್ ಉಪಾಧ್ಯಕ್ಷ ಡಾ| ಗೋಪಾಲ್ ಮುಗೇರಾಯ , ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ನಿರಂಜನ್ ಕುಮಾರ್, ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷ ರಾಘವೇಂದ್ರ ಹೊಳ್ಳ ಭಾಗವಹಿಸಲಿದ್ದಾರೆ.
ಮಾಹಿತಿ ಕಾರ್ಯಾಗಾರ
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಐಸಿಎಐ ಮಾಜಿ ಅಧ್ಯಕ್ಷ ಎಸ್.ಎಸ್ ನಾಯಕ್ ಭಾಗವಹಿಸಿ “ಹೊಸ ಉದ್ಯಮಿಗಳಿಗೆ ಮಾರ್ಗಸೂಚಿ, ರಚನೆ ಮತ್ತು ಅಭಿವೃದ್ಧಿ” ವಿಷಯದ ಕುರಿತು, ಎ.ಐ.ಸಿ. ನಿಟ್ಟೆ ಇನ್ಕ್ಯುಬೇಷನ್ ಸೆಂಟರ್‌ನ ಸಿಇಒ ಡಾ. ಎ.ಪಿ ಆಚಾರ್ “ಸ್ಟಾರ್ಟ್‌ಅಪ್‌ಗಳಿಗಾಗಿ ಇನ್ಕ್ಯುಬೇಷನ್ ಸೌಲಭ್ಯ” ಎಂಬ ವಿಚಾರದಲ್ಲಿ, ಬೆಂಗಳೂರಿನ ಸ್ಟಾರ್ಟ್ ಅಪ್ ಮೆಂಟರ್ ಪ್ರತೀಕ್ಷಾ ಪೈ. ’‘ಸ್ಟಾರ್ಟ್‌ಅಪ್‌ಗಳಿಗಾಗಿ ಹಣಕಾಸು ಆಯ್ಕೆಗಳು” ವಿಷಯದ ಕುರಿತು, ಎಸ್.ಎಸ್. ನಾಯಕ್ ಅಸೋಸಿಯೇಟ್ ಪಾಲುದಾರ ಸಂಕೇತ್ ಎಸ್. ನಾಯಕ್ “ಎಂಎಸ್‌ಎಂಇಗಳಿಗೆ ಹಣಕಾಸು ಆಯ್ಕೆಗಳು, ಯೋಜನೆಗಳು ಮತ್ತು ಸಬ್ಸಿಡಿಗಳು” ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.

ಡಿ. 16ರಂದು ನಡೆಯುವ ಕಾರ್ಯಾಗಾರದಲ್ಲಿ ಪಿಎಂಎಫ್ ಎಂಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ “ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ಬೆಂಬಲ” ವಿಷಯದಲ್ಲಿ, ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ| ಬಿ. ಮಂಜ ನಾಯಕ್ ’‘ಮೀನು ಉತ್ಪನ್ನಗಳಲ್ಲಿ ಮೌಲ್ಯ ವರ್ದನೆಗಾಗಿ ಘಟಕಗಳ ಸ್ಥಾಪನೆ” ವಿಷಯದಲ್ಲಿ, ಮಾರ್ಕೆಟ್ ಬರ್ಡ್‌ನ ಫೌಂಡರ್ ಕು. ಆಂಡ್ರಿಯಾ ಗೊನ್ಸಾಲ್ವಿಸ್ “ಬ್ರ್ಯಾಂಡಿಂಗ್ ಮತ್ತು ಮಾಕೆಟಿಂಗ್” ವಿಷಯದಲ್ಲಿ , ಕೆನರಾ ಬ್ಯಾಂಕ್ ನಿವೃತ್ತ ಎಜಿಎಂ ವಸಂತ್ ಶೆಟ್ಟಿ “ಸಿಬಿಲ್ ಸ್ಕೋರ್” ವಿಚಾರದಲ್ಲಿ ಮಾತನಾಡಲಿದ್ದಾರೆ. ನಂತರ ನಡೆಯುವ ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್‌ಗಳ ಸವಾಲುಗಳ ಕುರಿತು ಚರ್ಚೆ ಮತ್ತು ಸಂವಾದದಲ್ಲಿ ಎಸ್.ಎಸ್. ನಾಯಕ್, ಡಾ|ಎ.ಪಿ.ಆಚಾರ್, ಡಾ| ಜ್ಞಾನೇಶ್ವರ ಪೈ ಮಾಲೂರು ಮತ್ತು ವಸಂತ್ ಶೆಟ್ಟಿ ಭಾಗವಹಿಸಲಿದ್ದಾರೆ.






