ಬಿಳಿನೆಲೆ ಪ್ರಾ.ಕೃ.ಪ.ಸ ಸಂಘದ ಚುನಾವಣೆ- ಜಯಭೇರಿ ಭಾರಿಸಿದ ಸಹಕಾರ ಭಾರತಿ ಅಭ್ಯರ್ಥಿಗಳು

0

ಪುತ್ತೂರು: ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಫೆ. 16 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಗೆದ್ದು ಕ್ಲೀನ್ ಸ್ವೀಪ್ ಗೈದಿದ್ದಾರೆ. ಈ ಬಾರಿ ಹೊಸ ಅಭ್ಯರ್ಥಿಗಳನ್ನು ಸಹಕಾರ ಭಾರತಿ ಕಣಕ್ಕಿಳಿಸಿದ್ದು, ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಚಿದಾನಂದ ದೇರಣೆ 624 ಮತ, ವಾಡ್ಯಪ್ಪ ಗೌಡ ಎರ್ಮಾಯಿಲ್ 561ಮತ, ಸತೀಶ್ ಎರ್ಕ 557 ಮತ, ವೆಂಕಟ್ರಮಣ ಕೋಲ್ಪೆ 555 ಮತ, ಹಾಗೂ ಗಿರಿಯಪ್ಪ ಗೌಡ ಮುಗೇರು 547 ಮತ, ಸಾಲಗಾರ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸರೋಜಿನಿ ಬಿಳಿನೆಲೆ 686 ಮತ, ರೇವತಿ ಹೊಸೋಕ್ಲು 597 ಮತ, ಹಿಂದುಳಿದ ವರ್ಗ ಎ ಯಿಂದ ಸುರೇಶ ಆರ್. ಎಸ್ 623 ಮತ, ಬಿ ಯಿಂದ ರಮೇಶ್ ವಾಲ್ತಾಜೆ 685 ಮತ, ಪರಿಶಿಷ್ಟ ಜಾತಿಯಿಂದ ತನಿಯಪ್ಪ 643ಮತ, ಪಂಗಡದಿಂದ ಹರೀಶ್ ಜಿ. ಎಚ್. 673 ಮತ, ಹಾಗೂ ಸಾಲಗಾರ ರಹಿತ ಕ್ಷೇತ್ರದಿಂದ ಸುರೇಶ ಕೆ. 83 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ.

ಮತ ಎಣಿಕೆ ಬಳಿಕ ಬಿಳಿನೆಲೆಯಲ್ಲಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಸುಬ್ರಹ್ಮಣ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಧುಸೂದನ್ ಕೊಂಬಾರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಮುರಳೀಧರ ಎರ್ಮಾಯಿಲ್, ಭವ್ಯಶ್ರೀ ಕುಕ್ಕಾಜೆ, ಶಾರದಾ ಬಿಳಿನೆಲೆ , ಶ್ರೀ ಗೋಪಾಲಕೃಷ್ಣ ದೇವಾಲಯದ ವ್ಯವಸ್ಥಾಪನ ಸಮಿತಿಯ ಮಾಜಿ ಕಾರ್ಯದರ್ಶಿ ಯಶೋಧರ ಬಾಲಡ್ಕ, ಬೂತ್ ಸಮಿತಿಯ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here