ಅಧ್ಯಕ್ಷರಾಗಿ ನವಾಝ್, ಕಾರ್ಯದರ್ಶಿಯಾಗಿ ಹಂಝ ಪುನರಾಯ್ಕೆ
ಪುತ್ತೂರು: ಬದ್ರಿಯ ಜುಮಾ ಮಸೀದಿ ಪರ್ಪುಂಜ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷರಾದ ಝೈನುಲ್ ಅಬಿದಿನ್ ತಂಙಳ್ ದುಗ್ಗಲಡ್ಕ ಉಪಸ್ಥಿತಿಯಲ್ಲಿ ನಡೆಯಿತು. ಜಮಾಅತ್ ಕಾರ್ಯದರ್ಶಿ ಹಂಝ ಎಂ ಲೆಕ್ಕಪತ್ರ ಮಂಡಿಸಿದರು.
2025-26ನೇ ಸಾಲಿನ ಪದಾಧಿಕಾರಿಗಳಾಗಿ ಹಾಲಿ ಸಮಿತಿಯನ್ನೇ ಮುಂದುವರಿಸುವುದೆಂದು ತೀರ್ಮಾನಿಸಲಾಯಿತು. ಅಧ್ಯಕ್ಷರಾಗಿ ಮೂರನೇ ಬಾರಿಗೆ ನವಾಝ್ ಸುಪ್ರೀಂ ಹಾಗೂ ಕಾರ್ಯದರ್ಶಿಯಾಗಿ 5ನೇ ಬಾರಿಗೆ ಹಂಝ ಎಂ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಶರೀಫ್ ಪಿ.ಪಿ, ಜೊತೆ ಕಾರ್ಯದರ್ಶಿಯಾಗಿ ನಝೀರ್ ಪಿ ಆಯ್ಕೆಯಾದರು. ಸದಸ್ಯರಾಗಿ ಶರೀಫ್ ಹಾಜಿ, ಮಹಮ್ಮದ್ ಹಾಜಿ, ಹನೀಫ್ ಭಾರತ್, ಸಿದ್ದಿಕ್ ಪರ್ಪುಂಜ, ರಶೀದ್ ಕೆ, ಅಬೂಬಕ್ಕರ್ ನೆಲ್ಯಾಡಿ, ಹಸೈನಾರ್ ಡಿಂಬ್ರಿ, ಮೂಸ ಪಿ.ಎಂ, ಅಬ್ದುಲ್ ರಹಿಮಾನ್, ಆಡಿಟರ್ ಸಿರಾಜ್ ಜೆಜೆಬಿ ಆಯ್ಕೆಯಾದರು.
ಖತೀಬ್ ರಫೀಕ್ ಫೈಝಿ, ಮುಹಝಿನ್ ಜಮಾಲ್ ಉಸ್ತಾದ್ ಉಪಸ್ಥಿತರಿದ್ದರು.