ಪುತ್ತೂರು: ಸರ್ವೆ ವಲಯ ಕಾಂಗ್ರೆಸ್ ಸಭೆ ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ನಡೆಯಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ವಲಯಾಧ್ಯಕ್ಷ ಎಸ್. ಡಿ. ವಸಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ವಲಯ ಸಮಿತಿ ಆಯ್ಕೆ ಪ್ರಕ್ರಿಯೆಯನ್ನು ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ನಡೆಸಿದರು.
ಅಧ್ಯಕ್ಷರಾಗಿ ಮುಂಡೂರು ಗ್ರಾ,ಪಂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು, ಉಪಾದ್ಯಕ್ಷರಾಗಿ ಹನೀಫ್ ಕೂಡುರಸ್ತೆ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ಕೋಶಾಧಿಕಾರಿಯಾಗಿ ಶಶಿಧರ್ ಎಸ್.ಡಿ ಅವರನ್ನು ಆಯ್ಕೆ ಮಾಡಲಾಯಿತು.
192 ಬೂತ್ ಅಧ್ಯಕ್ಷರಾಗಿ ಅಶೋಕ್ ಎಸ್.ಡಿ, 193 ಬೂತ್ ಅಧ್ಯಕ್ಷರಾಗಿ ಹನೀಫ್ ಕಲ್ಪಣೆ, 194 ಬೂತ್ ಅಧ್ಯಕ್ಷರಾಗಿ ಹಮೀದ್ ನೇರೋಳ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು. 5 ವಲಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಅಝೀಝ್ ರೆಂಜಲಾಡಿ, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಧನಂಜಯ ಪೂಜಾರಿ, ಎಸ್.ಸಿ ಘಟಕದ ಅಧ್ಯಕ್ಷರಾಗಿ ದಿನೇಶ್ ಭಕ್ತಕೋಡಿ, ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾಗಿ ಅರುಣ್ ಕಲ್ಲಮ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ಕಿರಣ್ ಎಸ್.ಡಿ, ಕಿಸಾನ್ ಘಟಕದ ಅಧ್ಯಕ್ಷರಾಗಿ ಯತೀಶ್ ರೈ ಮೇಗಿನಗುತ್ತು, ಸೇವಾದಳದ ಅಧ್ಯಕ್ಷರಾಗಿ ಹಂಝ ಕೂಡುರಸ್ತೆ, ಎಸ್.ಟಿ ಘಟಕದ ಅಧ್ಯಕ್ಷರಾಗಿ ಚಂದ್ರಶೇಖರ ನಾಯ್ಕ ಕಟ್ಟಪುಣಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶರೂನ್ ಸಿಕ್ವೇರಾ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ವಿಶ್ವಜಿತ್ ಅಮ್ಮುಂಜ, ಕಾರ್ಯದರ್ಶಿ ಗಂಗಾಧರ ಶೆಟ್ಟಿ, ಮುಂಡೂರು ಗ್ರಾ.ಪಂ ಸದಸ್ಯರಾದ ರಸಿಕಾ ರೈ ಮೇಗಿನಗುತ್ತು, ಮಹಮ್ಮದ್ ಆಲಿ ನೇರೋಳ್ತಡ್ಕ, ತಾ.ಪಂ ಮಾಜಿ ಸದಸ್ಯೆ ಸುಮತಿ ಪರಂಟೋಲು, ಮುಂಡೂರು ಗ್ರಾ.ಪಂ ಮಾಜಿ ಸದಸ್ಯರಾದ ರಾಮಚಂದ್ರಸೊರಕೆ, ಶಿವನಾಥ ರೈ ಮೇಗಿನಗುತ್ತು, ಗಣೇಶ್ ನೇರೋಳ್ತಡ್ಕ, ಎಸ್.ಎಂ ಶರೀಫ್ ಸರ್ವೆ, ಕುಸುಮ ಪರಂಟೋಲು, ಉದಯ ರೈ ಬಾಕುಡ, ಎಸ್.ಟಿ ಘಟಕದ ಬ್ಲಾಕ್ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು, ಮುಂಡೂರು ಸಿ.ಎ ಬ್ಯಾಂಕ್ ನಿರ್ದೇಶಕ ಕೊರಗಪ್ಪ ಸೊರಕೆ, ಸರ್ವೆ ಯುವ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಎಸ್ ಡಿ, ಮಹಿಳಾ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷೆ ಗೀತಾ ಮರಿಯ, ಬಾಲಕೃಷ್ಣ ಕಲ್ಲಗುಡ್ಡೆ, ಅಣ್ಣು ಪರಂಟೋಲು, ಸಾಂತಪ್ಪ ಕಲ್ಕಾರು, ಕರಿಯಪ್ಪ ಕೆ ಎಸ್, ಶರತ್ ನೇರೋಳ್ತಡ್ಕ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. 194 ಬೂತ್ ಅಧ್ಯಕ್ಷ ಮಜೀದ್ ಬಾಳಾಯ ವಂದಿಸಿದರು.