ಎಸ್.ಜಿ ಕ್ರಿಯೇಷನ್ ಅರ್ಪಿಸುವ ತುಳು ಭಕ್ತಿಗೀತೆ “ಪಾಪೆಮಜಲ್ದ ಸ್ವರ್ಣದೀಪ” ಪೋಸ್ಟರ್ ಬಿಡುಗಡೆ

0

ಪಾಪೆಮಜಲು: ಎಸ್.ಜಿ ಕ್ರಿಯೇಷನ್ ಅರ್ಪಿಸುವ ಶ್ರೀ ಕೊರಗ ತನಿಯ ಹಾಗೂ ಗುಳಿಗ ಸಾನಿಧ್ಯ ಪಾಪೆಮಜಲು ಕುತ್ಯಾಡಿ ಸಾನಿಧ್ಯದ ಸುಮಧುರವಾದ ತುಳು ಭಕ್ತಿಗೀತೆ “ಪಾಪೆಮಜಲ್ದ ಸ್ವರ್ಣದೀಪ “ಎಂಬ ಪೋಸ್ಟರ್ ಫೆ.23ರಂದು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಾನಿಧ್ಯದ ಸಮಿತಿಯವರು ಹಾಗೂ ಪಿ.ಎ.ಎಸ್. ಒಪೊರೇಟರ್ಸ್ ಉಪಸ್ಥಿತರಿದ್ದರು. ಸುನಿಲ್ ಗೌಡ ಆಲಂತ್ತಡ್ಕ ಸಾರಥ್ಯವಿರುವ ಈ ಭಕ್ತಿಗೀತೆಯ ಸಾಹಿತ್ಯವನ್ನು ಶೆಟ್ಟಿ ಅಜಯ್ ರಾಯ್ ಬರೆದಿದ್ದಾರೆ. ಗಾಯನವನ್ನು ಜಯಶ್ರೀ ಬೆಳ್ತಂಗಡಿ ಮತ್ತು ವಿಡಿಯೋ -ಸಂಕಲನವನ್ನು ಎಸ್.ಡಿ.ಎಸ್ ಮ್ಯೂಸಿಕ್ ವೈಬ್ಸ್ ಕಾಸರಗೋಡು ಮಾಡಿರುತ್ತಾರೆ.

ಫೆ.27 ಗುರುವಾರ ಸಾನಿಧ್ಯದಲ್ಲಿ 16ನೇ ವರ್ಷದ ಕೊರಗ ತನಿಯ ಹಾಗೂ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ಅದೇ ದಿನ ರಾತ್ರಿ “ಪಾಪೆಮಜಲ್ದ ಸ್ವರ್ಣ ದೀಪ ” ಭಕ್ತಿಗೀತೆ ರಿಲೀಸ್ ಆಗಲಿದೆ.

LEAVE A REPLY

Please enter your comment!
Please enter your name here