ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೈಕಾರದಲ್ಲಿ ಕಲಿಕಾ ಹಬ್ಬ, ಎಫ್.ಎಲ್.ಎನ್ 2025 ಮೂಡಿಬಂದಿತು. ಕುಂಬ್ರ ಕ್ಲಸ್ಟರ್ ಮಟ್ಟದ ಸುಮಾರು 10 ಶಾಲೆಗಳ, ಸುಮಾರು 100 ವಿದ್ಯಾರ್ಥಿಗಳ ಸುಮಾರು 25 ಅಧ್ಯಾಪಕರ, ವಿವಿಧ ಶಾಲೆಗಳ ಪೋಷಕರ ಸಹಕಾರದೊಂದಿಗೆ ಸಮಾರಂಭ ಜರುಗಿತು.

ಆಕರ್ಷಣೀಯ ಮೆರವಣಿಗೆಯನ್ನು ಶತಮಾನೋತ್ಸವ ಸಮಿತಿಯ ಗೌರವ ಅಧ್ಯಕ್ಷ ಶಿವರಾಮಶೆಟ್ಟಿ ಬಿಲ್ಲಜೆ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ತ್ರಿವೇಣಿ ಪಲ್ಲತ್ತಾರು ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು ಇಷ್ಟು ಭವ್ಯ ಕಾರ್ಯಕ್ರಮದ ನಿರೀಕ್ಷೆ ಇರಲಿಲ್ಲ, ಇದೊಂದು ಶಿಕ್ಷಣಕ್ಕೆ ಪೂರಕವಾದ ಕಾರ್ಯಕ್ರಮ, ಕೈಕಾರ ಶಾಲೆಯಲ್ಲಿ ಬಹಳ ಅಚ್ಚುಕಟ್ಟುತನದಿಂದ ಈ ಕಾರ್ಯಕ್ರಮ ನೆರವೇರುತ್ತಿರುವುದು ನನಗೆ ಅತ್ಯಂತ ಸಂತಸ ತಂದಿದೆ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮ ಕೂಡ ಅತಿ ಅಚ್ಚುಕಟ್ಟಿನಿಂದ ಕೂಡಿರುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭಾಶಯ ಹೇಳಿದರು.

ಕೈಕಾರ ಶಾಲೆಯ ಹಿರಿಯ ವಿದ್ಯಾರ್ಥಿ ಸವಣೂರು ಗ್ರಾ.ಪಂ. ಸದಸ್ಯ ಭರತ್ ಶೆಟ್ಟಿ ಬಿಲ್ಲಜೆ ಮಾತನಾಡಿ ಕೈಕಾರ ಶಾಲೆ ಶತಮಾನವನ್ನು ಕಾಣುತ್ತಿರುವ ಶಾಲೆಯಾಗಿದೆ. ಈ ಮೊದಲು ಕೂಡ ಶಾಲೆಗೆ ನಾನು ಸಹಕಾರ ನೀಡಿದ್ದೇನೆ, ಮುಂದೆಯೂ ನೀಡುತ್ತೇನೆ. ಇಲ್ಲಿನ ಅಚ್ಚುಕಟ್ಟು ನನಗೆ ಬಹಳ ಸಂತೋಷ ಕೊಟ್ಟಿದೆ. ಎಂದು ಶುಭ ಹಾರೈಸಿದರು.
ಉದ್ಯಮಿ ಹಿರಿಯ ವಿದ್ಯಾರ್ಥಿ ಹರೀಶ್ ಕುಲಾಲ್ ಕಾರ್ಯಕ್ರಮದ ವ್ಯವಸ್ಥೆಗೆ ಸಂತಸ ವ್ಯಕ್ತಪಡಿಸಿದರು. ತುಳುವಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ದಾನಿಗಳಾದ ಗೀತಾ ಪಿಂಗರ ಕಾರ್ಯಕ್ರಮಕ್ಕೆ ತುಳುವಿನಲ್ಲಿ ಶುಭಾಶಯ ಹೇಳಿದರು. ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಕೆರಿಯವರು ಸಂದರ್ಭೋಚಿತವಾಗಿ ಮಾತನಾಡಿದರು, ರೇಖಾ ಯತೀಶ್ ಅವರು ಶುಭಾಶಯಗಳು ಹೇಳಿದರು. ಎಸ್ಡಿಎಂಸಿ ಉಪಾಧ್ಯಕ್ಷೆ ಸುಧಾ ರೈ ಶುಭಾಶಯ ಹೇಳಿದರು. ದಾನಿಗಳಾದ ರಾಮಚಂದ್ರ ಅಡಪ್ಪ ಬಾಣಬೆಟ್ಟು ಎಂದು ಶುಭಾಶಯ ನೀಡಿದರು.
ಶತಮಾನೋತ್ಸವ ಸಮಿತಿಯ ಸಂಚಾಲಕ ಸೀತಾರಾಮ ರೈ ಯಾವುದೇ ಕಾರ್ಯಕ್ರಮ ಮಾಡುವುದಕ್ಕೆ ಎಲ್ಲರ ಸಹಕಾರ ಬೇಕು. ಕೈಕಾರದಲ್ಲಿ ಮಾಡುವ ಎಲ್ಲಾ ಕಾರ್ಯಕ್ರಮಗಳು ಕೂಡ ಯಶಸ್ವಿ ಯಾವುದಕ್ಕೆ ಎಲ್ಲರ ಸಹಕಾರ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವರಾಮ ಶೆಟ್ಟಿ ಬಿಲ್ಲಜೆ, ಚಂದ್ರಹಾಸ ರೈ ಪನಡ್ಕ, ಶಶಿಕಿರಣ್ ರೈ ಮೂಡಪ್ಪ ಡಿ, ಸಂಜೀತ್ ರೈ ತೊಟ್ಲ, ಕಿರಣ್ ರೈ ಪುಂಡಿಕಾಯಿ, ಪ್ರಜ್ವಲ್ ರೈ ಕೈಕಾರ (ಚಿಪ್ಪಾರ್ ಗೊತ್ತು), ಸಂತೋಷ್ ರೈ ಎರ್ಮೆಟಿ, ಗಣೇಶ್ ರೈ ನಿವೃತ ಅಂಚೆ ಅಧಿಕಾರಿ, ಜಗದೀಶ ರೈ ಕೈಕಾರ, ವಿವಿಧ ಶಾಲಾ ಅಧ್ಯಾಪಕರು, ವಿದ್ಯಾರ್ಥಿವೃಂದ ಪೋಷಕರು ಉಪಸ್ಥಿತರಿದ್ದರು.
ಪ್ರಾಸ್ತವಿಕ ಮಾತಿನೊಂದಿಗೆ ಸ್ವಾಗತವನ್ನು ಶಶಿಕಲಾ ಸಿ.ಆರ್.ಪಿ ಕುಂಬ್ರ ಮಾಡಿದರು. ಶಾಲಾ ಮುಖ್ಯ ಶಿಕ್ಷಕ ದಕ್ಷಿಣದ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ರಾಮಣ್ಣ ರೈ ಧನ್ಯವಾದಗೈದರು. ಜಯಶ್ರೀ, ರಾಜೇಶ್ವರಿ, ಸೂರಜ್, ಶೋಭಾ, ಮೀನಾಕ್ಷಿ, ಕುಸುಮ ಸಹಕಾರ ನೀಡಿದರು.