ಕಡಮಜಲು ಸುಭಾಸ್‌ ರೈಯವರಿಂದ ಮಹಾಕುಂಭ ಮೇಳದ ತ್ರಿವೇಣಿ ಸಂಗಮ ತೀರ್ಥ ವಿತರಣೆ

0

ಪುತ್ತೂರು: ಕಡಮಜಲು ಸುಭಾಸ್‌ ರೈ ದಂಪತಿ 45ರ ದಾಂಪತ್ಯ ಸಂಭ್ರಮ ಕಡಮಜಲು 75ರ ಅಮೃತ ವರ್ಷವನ್ನು ಸರಳ ರೀತಿಯಲ್ಲಿ ಆಚರಿಸಿ, ಮಹಾಕುಂಭಮೇಳ ತ್ರಿವೇಣಿ ಸಂಗಮ ತೀರ್ಥಸ್ನಾನ ಅಯೋಧ್ಯೆ- ಕಾಶಿ ಕ್ಷೇತ್ರಗಳ ತೀರ್ಥ ಯಾತ್ರೆಯನ್ನು ಕೈಗೊಂಡಿದ್ದರು. ಫೆ.26 ಮಹಾಶಿವರಾತ್ರಿಯಂದು ಸನ್ಯಾಸಿಗುಡ್ಡೆ ಹಾಲು ಉತ್ಪಾದಕರ ಮಹಿಳಾ ಸ್ವ. ಸಂಘದ ವಠಾರದಲ್ಲಿ ತ್ರಿವೇಣಿ ಸಂಗಮದ ತೀರ್ಥವನ್ನು ವಿತರಿಸಿದರು.

ಕಡಮಜಲು ಸುಭಾಸ್‌ ರೈ ಮಾತನಾಡಿ , 144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗ್‌ ರಾಜ್‌ ಮಹಾಕುಂಭ ಮೇಳ ನಮ್ಮ ಜೀವಿತ ಅವಧಿಯಲ್ಲಿ ಬಂದಿರುವುದು ನಮ್ಮ ಭಾಗ್ಯ.75 ಹರೆಯದ ನಾನು ಮತ್ತು ಪತ್ನಿ ಪ್ರೀತಿ ಎಸ್‌ ರೈ ಮಹಾಕುಂಭ ಮೇಳ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ ಪುಣ್ಯತ್ಮರಾಗಿದ್ದೇವೆ. ಬಂಧು, ಮಿತ್ರರು, ತಮಗೆ ತೀರ್ಥಯಾತ್ರೆಗೆ ಶುಭ ಹಾರೈಸಿದ್ದಾರೆ ಕೃತಜ್ಞತೆಗಳು. ಪುಣ್ಯತೀರ್ಥವನ್ನು ಪಡೆದ ನಾವೆಲ್ಲರೂ ಪುಣ್ಯವಂತರು. ಅನೀರಿಕ್ಷಿತವಾಗಿ ಒದಗಿ ಬಂದಿರುವ ತೀರ್ಥಯಾತ್ರೆಗೆ ಸಹಕರಿಸಿದ ಬಿಜೆಪಿ ಮಾಜಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡಬಿದ್ರೆಯವರಿಗೆ ಅಭಿನಂದನೆ ಎಂದರು.

ಈ ಸಂದರ್ಭದಲ್ಲಿ ಶ್ರೀರಾಮ ಭಜನಾ ಮಂದಿರ ಸನ್ಯಾಸಿಗುಡ್ಡೆ ಮಾಜಿ ಅಧ್ಯಕ್ಷ ಅರಿಯಡ್ಕ ಕರುಣಾಕರ ರೈ ಅತ್ರೆಜಾಲು, ಭಜನಾ ಮಂದಿರದ ಅಧ್ಯಕ್ಷ ಜೈ ಶಂಕರ ರೈ ಬೆದ್ರಮಾರು, ದ.ಕ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್‌ ರೈ ಕೋರಂಗ, ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಕರುಣಾಕರ ರೈ ಕೋರಂಗ, ಮುಂಡಾಳಗುತ್ತು ಮೋಹನ ಆಳ್ವ, ಕೆದಂಬಾಡಿ ಗ್ರಾ.ಪಂ ಸದಸ್ಯ ಕೃಷ್ಣ ಕುಮಾರ ಗೌಡ ಇದ್ಯಪೆ, ರಾಜೀವ ರೈ ಕೋರಂಗ, ನೇಮಣ್ಣ ಗೌಡ ಇದ್ಯಪೆ, ದಿನಕರ ರೈ ಮನಿಪ್ಪಾಡಿ, ಜಯಪ್ರಕಾಶ್‌ ಪಯಂದೂರು, ಬಾಲಕೃಷ್ಣ ಚೌಟ ಮೊಟ್ಟೆತ್ತಡ್ಕ, ಪುಷ್ಪಾವತಿ ಕೊಡಿಯಡ್ಕ, ಸದಾಶಿವ ರೈ ಪಯಂದೂರು, ಸುಮಿತ್‌ ಉಪಾಧ್ಯಯ ಪಟ್ಲಮೂಲೆ, ಶೀನಪ್ಪ, ಮೋನಪ್ಪ ಪೂಜಾರಿ ಪಯಂದೂರು, ಯತೀಶ್‌ ಕಾವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here