ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ವತಿಯಿಂದ ಮಾ.22 ಮತ್ತು 23ರಂದು ನಡೆಯಲಿರುವ 43ನೇ ವರ್ಷದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.27ರಂದು ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ನ ಅಧ್ಯಕ್ಷ ಕರಿಯಪ್ಪ ಕೆ.ಎಸ್ ಸರ್ವೆ, ಪ್ರಧಾನ ಕಾರ್ಯದರ್ಶಿ ಗಣೇಶ್ ನೇರೋಳ್ತಡ್ಕ, ಉಪಾಧ್ಯಕ್ಷ ಬಾಲಕೃಷ್ಣ ಕಲ್ಲಗುಡ್ಡೆ, ಸಂಘಟನಾ ಕಾರ್ಯದರ್ಶಿ ದಿನೇಶ್ ಭಕ್ತಕೋಡಿ, ಗರಡಿಯ ಮೇಲ್ವಿಚಾರಕರಾದ ಪುತ್ರಮುಗೇರ ಅಲ್ಂಗಪ್ಪೆ,
ಅರುಣ್ ಕಲ್ಲಮ, ರಾಧಾಕೃಷ್ಣ ಬಾವಿಕಟ್ಟೆ, ಸುಮತಿ ಕರ್ಮಿನಡ್ಕ, ಚೋಮ ಬಿ ಭಕ್ತಕೋಡಿ, ವಾಸು ಬಿ.ಎಂ ಭಕ್ತಕೋಡಿ, ಯಾದವ ಭಕ್ತಕೋಡಿ, ಶಿವಕುಮಾರ್ ಕಲ್ಲುಗುಡ್ಡೆ, ಸುಂದರ ಕಲ್ಲಗುಡ್ಡೆ, ಲಿಂಗಪ್ಪ ಅಲ್ಂಗಪ್ಪೆ, ದಿನೇಶ್ ಕಲ್ಕಾರು, ಮೋಹನ್ ಕಲ್ಕಾರು, ಸುಮಂತ್ ಕಟ್ಟತಡ್ಕ ಉಪಸ್ಥಿತರಿದ್ದರು.