ಪುತ್ತೂರು:ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉದ್ಯಮ ಕ್ಷೇತ್ರದ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸಲು ಅವಕಾಶಗಳನ್ನು ಒದಗಿಸುವ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ‍್ಯಕ್ರಮ ವ್ಯವಹಾರ ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ತಜ್ಞರಿಂದ (ಇಂಡಸ್ಟ್ರೀ ಸ್ಪೆಷಲಿಸ್ಟ್) ವಿಶೇಷ ಉಪನ್ಯಾಸಗಳು, ವ್ಯಾಪಾರ ಮೇಳಗಳಲ್ಲಿ ಭಾಗವಹಿಸುವ ಅವಕಾಶ, ಸೇಲ್ಸ್, ಅಕೌಂಟಿಂಗ್, ಮಾರ್ಕೆಟಿಂಗ್ ಮುಂತಾದ ವ್ಯಾಪಾರ ಆವರಣಗಳ ಭೇಟಿ, ಸಾಫ್ಟ್ ಸ್ಕಿಲ್ ತರಬೇತಿ, ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಮತ್ತು ಇನ್ನಿತರ ಕೌಶಲ್ಯಾಧಾರಿತ ತರಬೇತಿಗಳ ಮೂಲಕ ವಾಣಿಜ್ಯ ಕ್ಷೇತ್ರದ ಉದ್ಯಮ ಜ್ಞಾನವನ್ನು ನೀಡುವ ಗುರಿಯನ್ನು ಹೊಂದಿದೆ.ಉದ್ಯಮ ಮತ್ತು ಶಿಕ್ಷಣದ ನಡುವಿನ ಈ ಸಹಯೋಗದ ವಿಧಾನವು ವಿದ್ಯಾರ್ಥಿಗಳನ್ನು ನೈಜ-ಪ್ರಪಂಚದ ಸವಾಲುಗಳಿಗೆ ಸಿದ್ಧಪಡಿಸಲು ಅವಶ್ಯಕವಾಗಿದೆ.
ತೆಂಕಿಲದ ನರೇಂದ್ರ ಪ.ಪೂ.ಕಾಲೇಜಿನಲ್ಲಿ ವ್ಯವಹಾರ ಎಂಬ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ‍್ಯಕ್ರಮದ ಉದ್ಘಾಟನಾ ಸಮಾರಂಭ ಮಾರ್ಚ್ 6, ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ. ಉದ್ಘಾಟನೆಯನ್ನು ಲಘು ಉದ್ಯೋಗ ಭಾರತಿ ಸಂಸ್ಥೆ ಪುತ್ತೂರು ಇದರ ಅಧ್ಯಕ್ಷರಾದ ಕೇಶವ ಅಮೈ ಇವರು ನಡೆಸಿಕೊಡಲಿದ್ದಾರೆ. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಮುರಳೀಧರ ಕೆ. ಇವರು ವಹಿಸಿಕೊಳ್ಳಲಿದ್ದಾರೆ. ಮುಖ್ಯಅತಿಥಿಗಳಾಗಿ ಪುತ್ತೂರಿನ ಮುಳಿಯ ಜ್ಯುವೆಲ್ಲರ್ಸ್‌ನ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಮತ್ತು ಹಿಂದೂ ಎಕನಾಮಿಕ್ ಫೋರಮ್ ಇದರ ಪುತ್ತೂರು ಘಟಕದ ಅಧ್ಯಕ್ಷರಾದ ರವಿಕೃಷ್ಣ ಕಲ್ಲಾಜೆ ಇವರು ಭಾಗವಹಿಸಲಿದ್ದಾರೆ. ಸಭಾ ಕಾರ‍್ಯಕ್ರಮದ ಬಳಿಕ ಮೊದಲ ಅವಧಿಯಲ್ಲಿ ನಡೆಯಲಿರುವ ಪ್ಯಾನಲ್ ಡಿಸ್ಕಶನ್ಸ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಲಘು ಉದ್ಯೋಗ ಭಾರತಿ ಸಂಸ್ಥೆ ಪುತ್ತೂರು ಇದರ ಅಧ್ಯಕ್ಷರಾದ ಕೇಶವ ಅಮೈ ಮತ್ತು ಮಾಡರೇಟರ್ ಆಗಿ ಜೆಸಿಐ ಇದರ ರಾಷ್ಟ್ರೀಯ ತರಬೇತುದಾರರಾದ ಕೃಷ್ಣ ಮೋಹನ್ ಇವರು ಭಾಗವಹಿಸಲಿದ್ದಾರೆ.
ಎರಡನೇ ಅವಧಿಯಲ್ಲಿ ನಡೆಯಲಿರುವ ಪ್ಯಾನಲ್ ಡಿಸ್ಕಶನ್ಸ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜನೌಷಧಿ ಸಮೂಹ ಸಂಸ್ಥೆಗಳು ಇದರ ಮಾಲಕರಾದ ಶಿವರಂಜನ್ ಮತ್ತು ಮಾಡರೇಟರ್ ಆಗಿ ಪುತ್ತೂರಿನ ಮುಳಿಯ ಜ್ಯುವೆಲ್ಲರ್ಸ್‌ನ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಇವರು ಭಾಗವಹಿಸಲಿದ್ದಾರೆ.
ಮೂರನೇ ಅವಧಿಯಲ್ಲಿ ಜೆಸಿಐ ಇದರ ರಾಷ್ಟ್ರೀಯ ತರಬೇತುದಾರರಾದ ಕೃಷ್ಣ ಮೋಹನ್ ಇವರು ಮೃದುಕೌಶಲ್ಯಗಳ(ಸಾಫ್ಟ್ ಸ್ಕಿಲ್ಸ್) ಬಗ್ಗೆ ವಿಶೇಷ ಉಪನ್ಯಾಸ, ನಾಲ್ಕನೇ ಅವಧಿಯಲ್ಲಿ ನಡೆಯಲಿರುವ ಪ್ಯಾನಲ್ ಡಿಸ್ಕಶನ್ಸ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಯೆಳ್ತಿಮಾರು ಟ್ರೇಡರ್ಸ್ ಪುತ್ತೂರು ಇದರ ಮಾಲಕಿ ವಿಜಯಲಕ್ಷ್ಮಿ ಶೆಣೈ ಮತ್ತು ಮಾಡರೇಟರ್ ಆಗಿ ಹಿಂದೂ ಎಕನಾಮಿಕ್ ಫೋರಮ್ ಇದರ ಮಹಿಳಾ ಘಟಕದ ಅಧ್ಯಕ್ಷೆ ಕೃಷ್ಣವೇಣಿ ಪ್ರಸಾದ್ ಮುಳಿಯ ಇವರು ಭಾಗವಹಿಸಲಿದ್ದಾರೆ. ಎಂದು ಸಂಸ್ಥೆಯ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಗೆ ತಿಳಿಸಿದ್ದಾರೆ.