ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ: ಶರತ್ ಕುಮಾರ್
ಪುತ್ತೂರು: ಕೆಯ್ಯೂರು ಗ್ರಾಮ ಪಂಚಾಯತ್ನ ಮಕ್ಕಳ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ಮಾ.01 ರಂದು ಕೆಯ್ಯೂರು ಕೆಪಿಎಸ್ ಶಾಲೆಯಲ್ಲಿನಡೆಯಿತು. ಕೆಯ್ಯೂರು ಕ್ಲಸ್ಟರ್ ಸಿಆರ್ಪಿ ಶಶಿಕಲಾ ರವರು ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಶರತ್ ಕುಮಾರ್ ಮಾಡಾವುರವರು ಮಾತನಾಡಿ, ಮಾನವ ಅಭಿವೃದ್ಧಿ ಯ ಮೊದಲ ಮೆಟ್ಟಿಲು ಮಕ್ಕಳ ಅಭಿವೃದ್ಧಿ. ಮಕ್ಕಳು ನಮ್ಮ ಹಕ್ಕುಗಳನ್ನು ಅರಿತು ಕೊಂಡರೆ ತಮ್ಮಲ್ಲಿ ಸಾಮಾನ್ಯ ಜ್ಞಾನ ವೃದ್ಧಿಯಗುವುದರ ಜೊತೆಗೆ ಮುಂದಿನ ಜೀವನದಲ್ಕಿ ಉತ್ತಮ ಪ್ರಜೆಗಳಾಗಿ ನಿರ್ಮಾಣ ವಾಗಲು ಸಾಧ್ಯ. ಗ್ರಾಮದ ಅಭಿವೃದ್ಧಿ ಕೇವಲ ರಸ್ತೆ, ಚರಂಡಿ ರಚನೆ ಮಾತ್ರವಲ್ಲ, ಅದರ ಜೊತೆಗೆ ಮಕ್ಕಳ ಆರೋಗ್ಯ, ಸ್ವಚ್ಚತೆ, ಮತ್ತೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಿ ಮೂಡಿ ಬನ್ನಿ ಎಂದು ಹೇಳಿದರು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯರುಗಳಾದ ತಾರಾನಾಥ್ ಕಂಪ, ಮೀನಾಕ್ಷಿ ವಿ ರೈ, ನೆಬಿಸ, ಬಟ್ಯಪ್ಪ ರೈ ದೇರ್ಲ,ಗಿರಿಜಾ ಕಣಿಯಾರು, ಕೆಪಿಎಸ್ ಉಪ ಪ್ರಾಂಶುಪಾಲರಾದ ವಿನೋದ್ ಕುಮಾರ್. ಮುಖ್ಯಗುರುಗಳಾದ ಬಾಬು, ಅರೋಗ್ಯ ಇಲಾಖೆಯ ವಿದ್ಯಾ, ಶಾಲಾ ಶಿಕ್ಷಕರು, ವಿದ್ಯಾರ್ಥಿ ನಾಯಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದ್ದರು.