ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಭ ಭಜನಾ ಮಂಡಳಿಯ ವಾರ್ಷಿಕೋತ್ಸವದ ಅಂಗವಾಗಿ ನಡೆಯುವಂತಹ ನಗರ ಭಜನೆಗೆ ಮಾ.3ರಂದು ಸಮಿತಿಯ ಗೌರವ ಸಲಹೆಗಾರರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರು ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಗ್ರಾಮ ಭಜನೆಯ ಮೂಲಕ ಊರಿನ ಪ್ರತೀ ಮನೆ ಮನೆಗಳಿಗೆ ತೆರಳಿ ಭಜನೆಯ ಮೂಲಕ ದೇವರನ್ನು ಸ್ತುತಿಸುತ್ತಾ ಭಕ್ತಿಯಲ್ಲಿ ಪರವಶವಾಗುವುದು. ಭಕ್ತಿಯೇ ಇಲ್ಲಿ ಪ್ರಾಮುಖ್ಯತೆಯನ್ನು ವಹಿಸಿದರೆ ಸಮಾಜದ ವಿಭಜನೆಯನ್ನು ಭಜನೆಯ ಮೂಲಕ ಹೋಗಲಾಡಿಸುವುದು ಕೂಡಾ ಈ ನಗರ ಭಜನೆಯ ಉದ್ದೇಶ. ಎಲ್ಲರೂ ಈ ಭಜನೆಯಲ್ಲಿ ಪಾಲ್ಗೊಳ್ಳೋಣ, ದೇವರ ಅನುಗ್ರಹವನ್ನು ಪಡೆಯೋಣ ಎಂದರು. ಇದೇ ಸಂದರ್ಭದಲ್ಲಿ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಜನಾ ಮಂಡಳಿಯ ಟ್ರಸ್ಟ್ ನ ಅಧ್ಯಕ್ಷರಾದ ಜಗದೀಶ್ ಪೂಜಾರಿ, ಭಜನಾ ಸಮಿತಿಯ ಅಧ್ಯಕ್ಷರಾದ ಕೃಷ್ಣ ಕಿಶೋರ್ ಭಟ್ ಪೆಲತ್ತಿಂಜ, ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಸಪಲ್ಯ ಕೆಮನಾಜೆ, ಮಹಿಳಾ ಸಮಿತಿ ಅಧ್ಯಕ್ಷರಾದ ಗೀತಾ ಶಿವಪ್ಪ ನಾಯ್ಕ್ ಹಾಗೂ ಸಮಿತಿಯ ಪಧಾಧಿಕಾರಿಗಳು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು ನಂತರ ಅಳಕೆಮಜಲು ನಡುಬೈಲ್ ವ್ಯಾಪ್ತಿಯ ಮನೆಗಳಲ್ಲಿ ನಗರ ಭಜನಾ ಸೇವೆ ನಡೆಯಿತು.