ಪುತ್ತೂರು: ಮುಂಡೂರು ಗ್ರಾಮದ ಕಡ್ಯ ತೌಡಿಂಜ ಎಂಬಲ್ಲಿ ಮಾ.4ರಂದು ಗುಡ್ಡಕ್ಕೆ ಬೆಂಕಿ ಬಿದ್ದ ಘಟನೆ ನಡೆದಿದೆ. ವಿದ್ಯುತ್ ಕಂಬದಿಂದ ವಿದ್ಯುತ್ ಸೋರಿಕೆಯಾದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು ಸುಮಾರು 3 ಎಕ್ರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿಕೊಂಡಿತ್ತು.
ವಿಷಯ ತಿಳಿದ ನಮ್ಮ ಯುವಕರ ತಂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆವು ಎಂದು ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ತಿಳಿಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು. ಗಣೇಶ್ ಬಂಗೇರ ಕೊರುಂಗು, ಪದ್ಮಯ್ಯ ಬಂಡಿಕಾನ, ಅಶ್ರಫ್ ಮುಲಾರ್, ಯಾಕೂಬ್ ಮುಲಾರ್ ಮತ್ತಿತರರು ಸಹಕರಿಸಿದರು.