ಆಲಂಕಾರು:ಶ್ರೀ ಮಹಾಕಾಳಿ ಅಮ್ಮನವರು, ರಕ್ತೇಶ್ವರಿ,ವರ್ಣರ ಪಂಜುರ್ಲಿ,ಶಿರಾಡಿ,ಗುಳಿಗ ದೈವಗಳ ದೇವಸ್ಥಾನ ಕುಂಡಡ್ಕ ರಾಮಕುಂಜದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವಾಗೀಶ ಶಾಸ್ತ್ರಿ ತಂತ್ರಿಗಳ ನೇತೃತ್ವದಲ್ಲಿ ಮಾ.1ರಿಂದ 3 ರ ತನಕ ಪ್ರತಿಷ್ಠಾ ವಾರ್ಷಿಕ ಮತ್ತು ನೇಮೊತ್ಸವ ನಡೆಯಿತು.
ಫೆ.22 ರಂದು ಗೊನೆ ಮುಹೂರ್ತ ನಡೆದು, ಮಾ.1 ರಂದು ಹಸಿರುವಾಣಿ ಕಾರ್ಯಕ್ರಮ ನಡೆದು ಮಾ.2 ರಂದು ಬೆಳಿಗ್ಗೆ ಶ್ರೀ ಮಹಾಕಾಳಿ, ರಕ್ತೇಶ್ವರಿ,ವರ್ಣರ ಪಂಜುರ್ಲಿ,ಶಿರಾಡಿ,ಗುಳಿಗ ದೈವಗಳಿಗೆ ತಂಬಿಲ ಸೇವೆ ನಡೆದು ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ರಾಧಾಕೃಷ್ಣ ಭಜನಾ ಮಂಡಳಿ ಗೋಕುಲನಗರ,ಶ್ರೀ ದೇವಿ ಭಜನಾ ಮಂಡಳಿ ವರ್ನಡ್ಕ, ಶ್ರೀ ದೇವಿ ಭಜನಾ ತಂಡ ವರ್ನಡ್ಕ ರವರಿಂದ ಭಜನೆ ನಡೆದು ಶ್ರೀ ಮಹಾಕಾಳಿ, ರಕ್ತೇಶ್ವರಿ, ವರ್ಣರ ಪಂಜುರ್ಲಿ,ಶಿರಾಡಿ,ಗುಳಿಗ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆದು ಶ್ರೀ ಮಹಾಕಾಳಿ, ರಕ್ತೇಶ್ವರಿ, ವರ್ಣರ ಪಂಜುರ್ಲಿ ದೈವಗಳ ನೇಮೊತ್ಸವ ನಡೆಯಿತು ಮಾ.3 ರಂದು ಬೆಳಿಗ್ಗೆ ಶ್ರೀ ಶಿರಾಡಿ, ಗುಳಿಗ ದೈವಗಳ ನೇಮೊತ್ಸವ ನಡೆಯಿತು.
ಅಗಮಿಸಿದ ಭಕ್ತಾದಿಗಳು ಶ್ರೀ ಮಹಾಕಾಳಿ ಅಮ್ಮನವರು,ರಕ್ತೇಶ್ವರಿ, ವರ್ಣರ ಪಂಜುರ್ಲಿ,ಶಿರಾಡಿ, ಗುಳಿಗ ದೈವಗಳ ಪ್ರಸಾದ ಸ್ವೀಕರಿಸಿ ಅನ್ನಸಂತರ್ಪಣೆ ಯಲ್ಲಿ ಪಾಲ್ಗೊಂಡರು.ಈ ಸಂಧರ್ಭದಲ್ಲಿ ಅಡಳಿತ ಸಮಿತಿ ಮತ್ತು ಉತ್ಸವ ಸಮಿತಿಯ ಅಧ್ಯಕ್ಷರುಗಳಾದ ಯೋಗೀಶ ಕುಲಾಲ್ ಅಜ್ಜಿಕುಮೇರು,ಜಿನ್ನಪ್ಪ ಗೌಡ ಕುಂಡಡ್ಕ ,ಗೌರವಾಧ್ಯಕ್ಷರಾದ ಲಕ್ಷೀ೬ ನಾರಾಯಣ ರಾವ್ ಆತೂರು,ಧರ್ಮಪಾಲ ರಾವ್ ಕಜೆ,ಪ್ರದಾನ ಕಾರ್ಯದರ್ಶಿಗಳಾದ ರಾಜೇಶ್ ಗೌಡ ಬೈರಕಂಡ,ಪ್ರಶಾಂತ ಆರ್.ಕೆ,ಕೋಶಾಧಿಕಾರಿ ರಮೇಶ ಕುಂಡಡ್ಕ, ಉಪಾಧ್ಯಕ್ಷರುಗಳಾದ ತೇಜಕುಮಾರ್ ರೈ ವಳೆಂಜ,ಆಶೋಕ ಕೆ.ಆರ್,ಶಶೀಂದ್ರ ಅಜ್ಜಿಕುಮೇರು,ಜೀವನ್ ಶೆಟ್ಟಿ ಪಡಿಪ್ಪಿರೆ, ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬರೆಂಬಾಡಿ,ಎಲ್ಯಣ್ಣ ಪೂಜಾರಿ ಆರ್ವೆ,ಸತೀಶ್ ಗೌಡ ಕಜೆ,ವಿಶಾಲ ಗೌಡ ಆನ, ಗೌರವ ಸಲಹೆಗಾರರಾದ ನಿರಂಜನ ರಾವ್ ಬದೆಂಜ,ದಿವಾಕರ ರಾವ್ ಪಂಚವಟಿ, ಲೋಕನಾಥ ರೈ ಕೇಳ್ಕ,ಮೋನಪ್ಪ ಕುಲಾಲ್ ಬೊಳ್ಳರೋಡಿ,ಸದಾಶಿವ ಶೆಟ್ಟಿ ಮಾರಂಗ, ಕೆ.ವಿ ಕುಲಾಲ್ ಕುಂಡಡ್ಕ,ಆಶೋಕ್ ಕೊಯಿಲ,ಸುರೇಶ ಬೋಮ್ಮಿಮಜಲು,ಮತ್ತು ಬಾಬು ಪೆರ್ಜಿ,ಸಿ.ಆರ್ ಮೋಹನ್ ದಾಸ್ ಬರೆಂಬಾಡಿ, ಬಾಬು ಕುಲಾಲ್ ಪಾದೆ,ಸುರೇಶ್ ಯಾದವ ಕುದ್ಕೋಳಿ,ನೋಣಯ್ಯ ಕುಲಾಲ್ ಕಂಪ,ವೇದಸ್ಯ ಕುಲಾಲ್, ವಿವಿಧ ಸಮಿತಿಯ ಸಂಚಾಲಕರುಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.