ಪುತ್ತೂರು: ಸರಕಾರಿ ಪದವಿ ಪೂರ್ವ ಕಾಲೇಜು ಸವಣೂರು ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೆಟ್ರೋಲಿಯಂ ವಿತರಕರ ಸಂಘದ ವತಿಯಿಂದ ಸುಮಾರು ರೂ.2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶೌಚಾಲಯ ಸಂಕೀರ್ಣದ ಉದ್ಘಾಟನೆಯು ಮಾ.6 ರಂದು ನೆರವೇರಿತು.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೆಟ್ರೋಲಿಯಂ ವಿತರಕರ ಸಂಘದ 50ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಸಮಾಜಮುಖಿ ಸೇವೆಯ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ನಾಲ್ಕು ಕಡೆ ಶೌಚಾಲಯವನ್ನು ನಿರ್ಮಿಸುವ ಗುರಿಯನ್ನು ಇಟ್ಟು ಮೊದಲ ಕಾರ್ಯಕ್ರಮವಾಗಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮೂರು ಶೌಚಾಲಯಗಳನ್ನು ನಿರ್ಮಿಸಿ ಉದ್ಘಾಟನೆ ಮಾಡಿ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ.ರವರ ಕೋರಿಕೆ ಮೇರೆಗೆ ಮೆಗಾ ಪ್ಲಾಸ್ಟಿಕ್ ಇದರ ಮಾಲಕ ಆಸ್ಕರ್ ಆನಂದ್ ರವರ ನೇತೃತ್ವದಲ್ಲಿ ಈ ಅನುದಾನ ಬರಲು ಸಹಕಾರಿಯಾಗಿದೆ.

ಕಟ್ಟಡದ ಉದ್ಘಾಟನೆಯನ್ನು ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಸೀತಾರಾಮ ರೈ ಸವಣೂರುರವರು ಉದ್ಘಾಟಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳ ಮೂಲಕ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪುತ್ತೂರು ವೈದ್ಯಾಧಿಕಾರಿ ಡಾ. ದೀಪಕ್ ರೈ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಕಟ್ಟಡ ಸಮಿತಿಯ ಅಧ್ಯಕ್ಷ ಕೃಷ್ಣಕುಮಾರ್, ಉಡುಪಿ ಹಾಗೂ ದಕ್ಷಿಣ ಕನ್ನಡ ಪೆಟ್ರೋಲಿಯಂ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಜೆ ಸಿ ಅಲ್ವಾರಿಸ್, ಪ್ರಧಾನ ಕಾರ್ಯದರ್ಶಿ ಕಿರಣ್ ಪೈ, ಕೋಶಾಧಿಕಾರಿ ಪ್ರಕಾಶ್ ಶೆಣೈ, ಪೆಟ್ರೋಲಿಯಂ ಅಸೋಸಿಯೇಷನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಶ್ವಾಸ್ ಶಣೈ, ಕರ್ನಾಟಕ ಪೆಟ್ರೋಲಿಯಂ ಮಹಾಮಂಡಳಿಯ ಕಾರ್ಯದರ್ಶಿ, ಆನಂದ ಕಾರ್ನಾಡ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಸ್ಥೆಯ ಕಾರ್ಯಾಧ್ಯಕ್ಷರಾದ ಗಿರಿ ಶಂಕರ ಸುಲಾಯ, ಪ್ರಾಂಶುಪಾಲೆ ಶ್ರೀಮತಿ ಪದ್ಮಾವತಿ ಎನ್ ಪಿ ,ಮುಖ್ಯ ಗುರು ರಘು ಬಿ .ಆರ್, ಎಸ್ ಡಿ .ಎಂ. ಸಿ. ಅಧ್ಯಕ್ಷ ರಾಧಾಕೃಷ್ಣ ಉಪಸ್ಥಿತರಿದ್ದು ನಮ್ಮ ಸಂಸ್ಥೆಗೆ ಕೊಡುಗೆಯನ್ನು ನೀಡಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯ ಮಾತುಗಳ ಮೂಲಕ ಶುಭ ಹಾರೈಸಿ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವಾಸ್ ಶೆಣೈರವರು ಪ್ರಾಸ್ತಾವಿಕ ಮಾತುಗಳ ಮೂಲಕ ಸಂಸ್ಥೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು. ಪುತ್ತೂರು ವಾಣಿಜ್ಯ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪೆಟ್ರೋಲಿಯಂ ಅಸೋಸಿಯೇಷನ್ ಜಿಲ್ಲೆ ಹಾಗೂ ರಾಜ್ಯಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದು ಗಣ್ಯರಿಗೆ ಶಾಲು ಹಾಕಿ ಅಭಿನಂದಿಸಿದರು. ಉಭಯ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರು ಸಹಕರಿಸಿದರು. ದೀಪ್ತಿ ಹಾಗೂ ತಂಡ ಪ್ರಾರ್ಥಿಸಿ, ಕಾರ್ಯಕ್ರಮದ ನಿರೂಪಣೆಯನ್ನು ವಿಜ್ಞಾನ ಶಿಕ್ಷಕರಾದ ಕಿಶನ್ ಬಿ.ವಿ ನಿರ್ವಹಿಸಿ, ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ.ರವರು ವಂದಿಸಿದರು.
ಸನ್ಮಾನ
ಜೋಸ್ ಆಲುಕಾಸ್ ಸಂಸ್ಥೆಯ ಸಿ ಎಸ್ ಆರ್ ಫಂಡಿನ ಮೂಲಕ ನಮ್ಮ ಸಂಸ್ಥೆಗೆ ರೂಪಾಯಿ ರೂ.1 ಲಕ್ಷ ನಗದನ್ನು ನೀಡಿ ವಿದ್ಯಾರ್ಥಿಗಳಿಗೆ ಕೈ ತೊಳೆಯುವ ನೀರಿನ ತೊಟ್ಟಿಯನ್ನು ಕೊಡ ಮಾಡಿದ ಜೋಸ್ ಅಲುಕ್ಕಾಸ್ ಸಂಸ್ಥೆಯ ವ್ಯವಸ್ಥಾಪಕರಾದ ರತೀಶ್ ಸಿ.ಪಿ ರವರನ್ನು ನಮ್ಮ ಸಂಸ್ಥೆಯ ಪರವಾಗಿ ಹಾಗೆಯೇ ಶಾಲೆಗೆ ಅತ್ಯಗತ್ಯವಾದ ಸುಂದರವಾದ ಶೌಚಾಲಯ ಕಟ್ಟಡವನ್ನು ನಿರ್ಮಿಸಿಕೊಟ್ಟ UNICORN INFRA ದ ಸುಜಿತ್ ಬಾಳಿಗ, ವಿನೀತ್ ಶೆಣೈ ,ಪೆಟ್ರೋಲಿಯಂ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಜೆ.ಸಿ ಅಲ್ವರಿಸ್ ರವರನ್ನು ಶಾಲು ಹಾಕಿ ಸನ್ಮಾನಿಸಿ ಅಭಿನಂದಿಸಲಾಯಿತು. ಬಹಳ ಆಸಕ್ತಿಯಿಂದ ಮತ್ತು ಕಾಳಜಿಯಿಂದ ನಮ್ಮ ಸಂಸ್ಥೆಗೆ ಈ ಕೊಡುಗೆಯನ್ನು ನೀಡಲು ಕಾರಣಕರ್ತರಾದ ವಿಶ್ವಾಸ್ ಶೆಣೈ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಇವರನ್ನು ಸಂಸ್ಥೆ ಪರವಾಗಿ ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.