ಮೆಡಿಕಲ್ ಕಾಲೇಜು ಜೊತೆಜೊತೆಗೆ ಪುತ್ತೂರನ್ನೂ ಜಿಲ್ಲೆಯನ್ನಾಗಿಸುವ ಕನಸ್ಸಿಗೆ ಮತ್ತೆ ರೆಕ್ಕೆ ಬಂದಿದೆ- ಭಾಗ್ಯೇಶ್ ರೈ

0

ಕರಾವಳಿ ಭಾಗದ ಶಾಸಕರುಗಳು ವಿಧಾನಸಭೆಯಲ್ಲಿ ಮಾತನಾಡುವುದೇ ಇಲ್ಲವೆನ್ನುವಂಥ ಜನಸಾಮಾನ್ಯರ ಕೂಗಿನ ಮಧ್ಯೆಯೂ, ನಮ್ಮ ನೆಚ್ಚಿನ ಶಾಸಕರಾದ ಅಶೋಕ್ ಕುಮಾರ್ ರೈ ರವರು ಪ್ರತಿಯೊಂದು ಅಧಿವೇಶನದಲ್ಲೂ ಇಲ್ಲಿನ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವಲ್ಲಿ ಮೇಲ್ಪಂಕ್ತಿಯನ್ನು ಹಾಕಿದ್ದಾರೆ ಎನ್ನಬಹುದು. ನಾಡಿನ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವ ಜನಪ್ರತಿನಿಧಿಗಳನ್ನು ಪಕ್ಷಬೇಧವಿಲ್ಲದೆಯೇ ಅಭಿನಂದಿಸುವ ಪರಿಪಾಠವನ್ನು ಜನಸಾಮಾನ್ಯರು ಕೂಡ ಇದೀಗ ಪ್ರಾರಂಭಿಸಿರುವುದು ಅತ್ಯಂತ ಸಂತಸದ ವಿಷಯ. ಸರಕಾರಿ ಮೆಡಿಕಲ್ ಕಾಲೇಜ್ ಪುತ್ತೂರಿಗೆ ತರುವಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಪ್ರಥಮ ಹೆಜ್ಜೆಯನ್ನು ಇಟ್ಟಿದ್ದರು.ಇದೀಗ ಮತ್ತೆ ಬಹಳಷ್ಟು ಪ್ರಯತ್ನ ಮಾಡಿ ಶಾಸಕರಾದ ಅಶೋಕ್ ಕುಮಾರ್ ರೈ ಅವರು ದೊಡ್ಡ ಹೆಜ್ಜೆಯನ್ನು ಇಟ್ಟಿದ್ದಾರೆ. ಇದು ಸರಕಾರಿ ಮೆಡಿಕಲ್ ಕಾಲೇಜ್ ತರುವ ಪ್ರಯತ್ನದ ಜೊತೆಗೆ ಪುತ್ತೂರನ್ನು ಜಿಲ್ಲೆಯಾಗಿಸುವ ನಮ್ಮೆಲ್ಲರ ಕನಸಿನ ಮೊದಲ ಮೆಟ್ಟಿಲು ಎನ್ನಬಹುದು. ಶಾಸಕರ ಈ ಪ್ರಯತ್ನವನ್ನು ರಾಜ್ಯವೇ ತಿರುಗಿ ನೋಡುವಂತಾಗಿದೆ. ಶಾಸಕರಾದ ಅಶೋಕ್ ಕುಮಾರ್ ರೈ ರವರಿಗೆ ಹಾಗೂ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಗೆ ಧನ್ಯವಾದ..

ಭಾಗ್ಯೇಶ್ ರೈ
ಅಧ್ಯಕ್ಷರು ವಿದ್ಯಾಮಾತಾ ಅಕಾಡೆಮಿ, ಜೆಸಿಐ ಪುತ್ತೂರು

LEAVE A REPLY

Please enter your comment!
Please enter your name here