ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ದ್ವಂದ್ವ ಹಾಡುಗಾರಿಕೆ

0

ಅಖಿಲ ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಶಾಸ್ತ್ರೀಯ ಸಂಗೀತ ನೃತ್ಯ ವೇದಿಕೆಯ 174ನೇ ಸರಣಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾರ್ಚ್ 8 ಶನಿವಾರ ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ ದ್ವಂದ್ವ ಹಾಡುಗಾರಿಕೆಯು ಆಶ್ರಿತ್ ಕೃಷ್ಣ ದಾಳಿಂಬ ಹಾಗೂ ಅಭಿಜ್ಞಾ ರಾವ್ ದಾಳಿಂಬ ಇವರಿಂದ ದೇವಳದ ಧರ್ಮ ಸಮ್ಮೇಳನ ಮಂಟಪದಲ್ಲಿ ನಡೆಯಿತು.

ಮೃದಂಗದಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ, ವಾಯಲಿನ್ ನಲ್ಲಿ ಜ್ಯೋತಿ ಲಕ್ಷ್ಮಿ ಬಾಯಾರ್ ಸಾಥ್ ನೀಡಿದರು. ದೇವಸ್ಥಾನದ ವತಿಯಿಂದ ಕಲಾವಿದರಿಗೆ ದೇವರ ಪ್ರಸಾದದ ಜೊತೆ ಶಾಲು ಹೊದಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here