ಇರ್ವತ್ತೂರು ಪದವು: ಯಶಸ್ವಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ರಂಝಾನ್ ಕಿಟ್ ವಿತರಣಾ ಸಮಾರಂಭ ಕಾರ್ಯಕ್ರಮವನ್ನು ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಗೌರವ್ವಾನಿತ ಬಹುಮಾನ್ಯ ಉಮರ್ ಮದನಿ ದುಆ ಮಾಡುವ ಮೂಲಕ ಉದ್ಘಾಟಿಸಿದರು.
ಜನಾಬ್ ಹಾಜಿ ಮೂಸ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಯಾಗಿ ಎಸ್ ಅಬ್ದುಲ್ ರಹಿಮಾನ್ ರವರು ಮಾತನಾಡಿ, ಈ ಟ್ರಸ್ಟಿನ ಕಾರ್ಯಸಾಧನೆಗಳನ್ನು ಗುಣಗಾನ ಮಾಡಿದರು. ಚಾರಿಟಿ ಅಧ್ಯಕ್ಷರಾದ ಎಸ್.ಪಿ.ಮುಹಮ್ಮದ್ ರಫೀಕ್ ಮಾತನಾಡಿ, ತಮ್ಮ ಸಂಸ್ಥೆಯು ಸದ್ದಿಲ್ಲದೆ ಸುದ್ದಿಯಾದ ಬಗ್ಗೆ ಹೆಮ್ಮೆ ಪಟ್ಟು, ಯಶಸ್ವಿ ಟ್ರಸ್ಟ್ ಯಶಸ್ವಿಯಾಗಿ ಮುಂದೆಯೂ ಇನ್ನಷ್ಟು ಸಾಧನೆ ಮಾಡಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಶಾಲಾಭಿವೃದ್ಧಿ ಉಪಾಧ್ಯಕ್ಷರಾದ ಇಬ್ರಾಹಿಂ ಮೇಸ್ತ್ರಿ ಬಿ ಎಸ್ ನಗರ, ಅಬುಸಾಲಿ ಬಿ ಎಸ್ ನಗರ, ಆದಂ ನೇರಳಕಟ್ಟೆ, ಕೋಶಾಧಿಕಾರಿ ಶೇಕ್ ನಯಾಝ್, ಮೊಹಮ್ಮದ್ ರಾಝಿಕ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಕಲಾಬಾಗಿಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ವಲಾತ್ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಯವಾಯಿತು.