ಅಧ್ಯಕ್ಷ : ಸಾಹುಲ್ ಹಮೀದ್, ಉಪಾಧ್ಯಕ್ಷೆ: ಸವಿತಾ
ಪುತ್ತೂರು: ಇತ್ತೀಚೆಗೆ ಕಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಸಾಹುಲ್ ಹಮೀದ್ ಚೆವುತಕಳ ಹಾಗೂ ಉಪಾಧ್ಯಕ್ಷರಾಗಿ ಸವಿತಾ ಆಯ್ಕೆಯಾದರು.
ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಸದಸ್ಯರಾಗಿ ರವಿಕಲಾ ಎನ್., ಜಲಜಾಕ್ಷಿ, ಯಶೋಧ, ಪ್ರೇಮ, ಹೇಮಾವತಿ, ಕುಶಾಲಪ್ಪ, ರಮಣಿ, ಮೋನಪ್ಪ ಮೂಲ್ಯ, ತಾಹಿರಾ, ಸಾರಾ. ಬಿ., ಸಾರಾ .ಎ., ತಾಜ್ ಲಿಮ್ ತಾಜ್, ಅಪ್ಪಾ, ಆಲಿಕುಂಞ, ನಸೀಮಾ, ಫಾತಿಮಾ ರವರು ಆಯ್ಕೆಯಾದರು.
ಕಕ್ಕೂರು ವಾರ್ಡ್ ಸದಸ್ಯರಾದ ಮೋಇದ್ ಕುಂಞ, ಮಹಾಲಿಂಗನಾಯ್ಕ ಇವರು ಉಪಸ್ಥಿತರಿದ್ದರು. ಮುಖ್ಯಗುರು ಜ್ಯೋತಿ ಕೆ. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಎಸ್.ಡಿ.ಎಂ.ಸಿ. ರಚನಾ ನಿಯಮಾವಳಿಗಳನ್ನು ತಿಳಿಸಿದರು ಹಾಗೂ ರಚನಾ ಪ್ರಕ್ರಿಯೆ ನಿರ್ವಹಿಸಿದರು. ಸಹಶಿಕ್ಷಕಿ ಸುನೀತಾ ಎಮ್. ಹೆಚ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.