ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನ: ಶ್ರೀ ದೇವರಿಗೆ ಕಟ್ಟೆ ಪೂಜೆ, ಅವಭೃತ ಸ್ನಾನ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವರ ಆರಾಟ ಉತ್ಸವದ ಅಂಗವಾಗಿ ಉಪ್ಪಿನಂಗಡಿ ಪೇಟೆಯ ಹೊಸ ಬಸ್ ನಿಲ್ದಾಣ ಹಾಗೂ ಹಳೇ ಬಸ್ ನಿಲ್ದಾಣದ ದೇವರ ಕಟ್ಟೆಯಲ್ಲಿ ಕಟ್ಟೆ ಪೂಜೆಯು ಜರಗಿತು.


ಹೊಸ ಬಸ್ ನಿಲ್ದಾಣದ ಕಟ್ಟೆ ಪೂಜೆಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನೇತೃತ್ವದಲ್ಲಿ ದೇವರ ಕಟ್ಟೆ ಪೂಜನಾ ಸಮಿತಿಯ ಆಶ್ರಯದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ನಂದಿ ರಥ ಯಾತ್ರೆಯನ್ನು ಸ್ವಾಗತಿಸಿ ಪೂಜೆ ಸಲ್ಲಿಸಲಾಯಿತು. ಹಾಗೂ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಮಧ್ಯಾಹ್ನ ಅನ್ನ ಸಂತರ್ಪಣೆ, ಸಾಯಂಕಾಲ ಉಪಹಾರ , ಪ್ರಸಾದ ವಿತರಣೆಯು ನಡೆದಿದ್ದು, ಆಕರ್ಷಕ ಸುಡುಮದ್ದು, ಚೆಂಡೆ ವಾದನ , ಭಜನಾ ಕಾರ್ಯಕ್ರಮದೊಂದಿಗೆ ಕಟ್ಟೆ ಪೂಜೆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಾಯಿತು.

ಹಳೆ ಬಸ್‌ನಿಲ್ದಾಣದ ಬಳಿಯಲ್ಲಿ ಕಟ್ಟೆಪೂಜೆಯ ಪ್ರಯುಕ್ತ ಗೆಳೆಯರು – ೯೪ ಉಪ್ಪಿನಂಗಡಿ ಇವರ ವತಿಯಿಂದ ಅನುಗ್ರಹ ಮೆಲೋಡಿಸ್ ಮಂಗಳೂರು ಇವರಿಂದ `ಸಂಗೀತ ಗಾನ ಸಂಭ್ರಮ’ ನಡೆಯಿತು. ಕಟ್ಟೆಪೂಜೆಯಾದ ಬಳಿಕ ನದಿಗಳ ಸಂಗಮ ತಾಣದಲ್ಲಿ ಶ್ರೀ ದೇವರ ಅಭವೃತ ಸ್ನಾನವಾಗಿ ಧ್ವಜಾವರೋಹಣ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ ಪರ ಸಂಘಟನೆಗಳ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕರಾದ ಸಂಜೀವ ಮಠಂದೂರು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ ರಾಧಾಕೃಷ್ಣ ನಾೖಕ್ , ಸದಸ್ಯರಾದ ವೆಂಕಪ್ಪ ಪೂಜಾರಿ, ಕೃಷ್ಣ ರಾವ್ ಅರ್ತಿಲ, ನಿಕಟಪೂರ್ವಾಧ್ಯಕ್ಷ ಕರುಣಕಾರ ಸುವರ್ಣ, ಮಾಜಿ ಸದಸ್ಯರಾದ ಹರಿರಾಮಚಂದ್ರ, ಕಂಗ್ವೆ ವಿಶ್ವನಾಥ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ಧನಂಜಯ ನಟ್ಟಿಬೈಲು, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಎಂ. ಸುದರ್ಶನ ಕುಮಾರ್, ಪೂಜನಾ ಸಮಿತಿಯ ಅಧ್ಯಕ್ಷ ಪ್ರಸಾದ್ ಪಚ್ಚಾಡಿ, ಉಪಾಧ್ಯಕ್ಷ ರಾಜೇಶ್ ಹತ್ತು ಕಲಸೆ, ಕಾರ್ಯದರ್ಶಿ ಸಂತೋಷ್ ಕುಮಾರ್ ಪೆರಿಯಡ್ಕ, ಜೊತೆ ಕಾರ್ಯದರ್ಶಿ ರವಿನಂದನ್ ಹೆಗ್ಡೆ, ಕೋಶಾಧಿಕಾರಿ ತಿಮ್ಮಪ್ಪ ಇಳಂತಿಲ, ಗೌರವ ಸಲಹೆಗಾರ ರವೀಂದ್ರ ಆಚಾರ್ಯ, ಗೆಳೆಯರು- ೯೪ ಬಳಗದ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳಾವು, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಪ್ರಸಾದ್ ಆಚಾರ್ಯ, ಕಾರ್ಯದರ್ಶಿ ಅಚಲ್ ಉಬರಡ್ಕ, ಜಗದೀಶ್ ಶೆಟ್ಟಿ ಕೆ., ಗುಣಕರ ಅಗ್ನಾಡಿ, ಪ್ರಮುಖರಾದ ರಾಜಗೋಪಾಲ ಭಟ್, ಮಾಧವ ಆಚಾರ್ಯ, ರತ್ನಾಕರ ಆಳ್ವ ಎನ್., ರಾಘವೇಂದ್ರ ನಾಯಕ್ ಎನ್. , ಹೆಚ್. ಸುಬ್ರಹ್ಮಣ್ಯ ಶೆಣೈ, ಮಹೇಶ್ ಬಜತ್ತೂರು, ಹರೀಶ್ ಶೆಟ್ಟಿ, ಕಿಶೋರ್ ನೀರಕಟ್ಟೆ , ಹರೀಶ್ ನಾಯಕ್ ನಟ್ಟಿಬೈಲು , ವೆಂಕಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here