ಪುತ್ತೂರು: ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಇದರ ದೈಹಿಕ ಶಿಕ್ಷಣ ವಿಭಾಗದಡಿಯಲ್ಲಿ ಸಂತ ಫಿಲೋಮಿನಾ ಕಾಲೇಜು ಪ್ರೀಮಿಯರ್ ಲೀಗ್ 2025- ಸೀಸನ್ 5 ಕ್ರಿಕೆಟ್ ಪಂದ್ಯಾಟವು ಮೇ.5 ರಂದು ಸಂತ ಫಿಲೋಮಿನಾ ಕ್ರೀಡಾಂಗಣದಲ್ಲಿ ಜರಗಿದ್ದು, ಸಂಭ್ರಮದ ತೆರೆ ಕಂಡಿದೆ.
ಸಂಜೆ ನಡೆದ ಫೈನಲ್ ಪಂದ್ಯಾಟದಲ್ಲಿ ಸುಹೈಲ್ ಹಾಗೂ ಶಫೀಕ್ ಮಾಲಕತ್ವದ ಸ್ಕ್ವಾಡ್ರನ್ ಎಕ್ಸ್ ಡಿಕ್ರೋಜ್ ತಂಡವು ಸುಹೈಲ್ ಹಾಗೂ ನವಾಜ್ ಮಾಲಕತ್ವದ ಟೀಮ್ ಹಿಟ್ ವೇವ್ಸ್ ತಂಡವನ್ನು ಮಣಿಸಿ ಎಸ್.ಪಿ.ಎಲ್ ಸೀಸನ್-5 ರ ಚಾಂಪಿಯನ್ ಎನಿಸಿಕೊಂಡಿತು. ಟೀಮ್ ಹಿಟ್ ವೇವ್ಸ್ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಸೆಮಿಫೈನಲ್ಸ್ ನಲ್ಲಿ ಚಾಂಪಿಯನ್ ತಂಡವಾದ ಸ್ಕ್ವಾಡ್ರನ್ ಎಕ್ಸ್ ಡಿಕ್ರೋಜ್ ವಿರುದ್ಧ ಸೋತ ಆಕಾಶ್ ತೆಂಕಿಲ ಹಾಗೂ ದೀಕ್ಷಿತ್ ಮಾಲಕತ್ವದ ಟೀಮ್ ಆಗಸ್ತ್ಯ ತಂಡವು ಮೂರನೇ ಸ್ಥಾನಿಯಾಗಿ, ರನ್ಬರ್ಸ್ ತಂಡ ಟೀಮ್ ಹಿಟ್ ವೇವ್ಸ್ ಎದುರು ಸೋತ ಸುಹಾಸ್ ಹಾಗೂ ಸೃಜನ್ ಮಾಲಕತ್ವದ ಅಗ್ನಿ ಬ್ರದರ್ಸ್ ತಂಡವು ಚತುರ್ಥ ಸ್ಥಾನವನ್ನು ಪಡೆಯಿತು. ಉಳಿದಂತೆ ದಿ ಗೋಟ್ಸ್, ಫಿಲೋ ಹಾಕ್ಸ್, ಆಸ್ಟ್ರೋ ಮೋಂಕ್ಸ್, ಕಾಲ್ ಡ್ರಾಕ್ಸ್, ಟಿ.ಎಂ ಟಿ.ಎಕ್ಸ್.ಎನ್, ಫಿಲೋಮಿನಾ ಕಾಲೇಜು ಉಪನ್ಯಾಸಕರ ಬಳಗ ತಂಡವು ಲೀಗ್ ಹಂತದಲ್ಲಿಯೇ ಹೊರ ಬಿದ್ದಿತ್ತು.
ಸಮಾರೋಪ:
ಪಂದ್ಯಾಟದ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈರವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡೆಯಲ್ಲಿ ಗೆಲ್ಲೋದು, ಸೋಲೋದು ಮುಖ್ಯವಲ್ಲ. ಕ್ರೀಡಾಸ್ಫೂರ್ತಿಯಿಂದ ಆಡಿ ಎಲ್ಲರ ಮನ ಗೆಲ್ಲೋದು ಬಹಳ ಮುಖ್ಯವಾಗಿದೆ. ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೊರವರ ನೇತೃತ್ವದಲ್ಲಿ ಉತ್ತಮ ಸಂಘಟನೆಯನ್ನು ಮಾಡುವ ಮೂಲಕ ಇದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹುದು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊರವರು ಮಾತನಾಡಿ, ಕ್ರೀಡಾಪಟುಗಳು ಕೇವಲ ಕ್ರೀಡೆಯಲ್ಲಿ ಮಾತ್ರ ಉತ್ಸಾಹವನ್ನು ತೋರದೆ ಇತರ ವಿಭಾಗಗಳಲ್ಲೂ ಉತ್ಸಾಹವನ್ನು ತೋರಿಸಬೇಕು. ಸೋತವರು ಧೃತಿಗೆಡದೆ ಮುಂದಿನ ಗೆಲುವಿನ ಅವಕಾಶಕ್ಕಾಗಿ ಕಾಯಬೇಕು, ಗೆದ್ದವರು ಮತ್ತೊಂದು ಗೆಲುವಿನ ಕಡೆಗೆ ಮುನ್ನಡೆಯಬೇಕು ಎಂದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೆಕ್ಸನ್ ಫೆರ್ನಾಂಡೀಸ್, ಕ್ರೀಡಾ ಕಾರ್ಯದರ್ಶಿ ಅನ್ವೇಶ್ ರೈರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಪೈರ್ ಗಳಾಗಿ ಮೇಗಸ್ ಮಸ್ಕರೇನ್ಹಸ್, ಪುರುಷೋತ್ತಮ ಬೆಳ್ಳಾರೆ, ಮ್ಯಾಕ್ಲಿನ್ ಫೆರ್ನಾಂಡೀಸ್, ಶ್ರೇಯಸ್ ಆನಂದ್ ರವರು ಕಾರ್ಯ ನಿರ್ವಹಿಸಿದ್ದರು. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೊರವರು ವಿಜೇತರ ಪಟ್ಟಿ ವಾಚಿಸಿ, ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಸಹಕರಿಸಿದರು.
ಉತ್ತಮ ಬ್ಯಾಟರ್-ಅಭಿರಾಮ್, ಟೀಮ್ ಆಗಸ್ತ್ಯ
ಉತ್ತಮ ಬೌಲರ್-ಪ್ರಜ್ವಲ್, ಟೀಮ್ ಹಿಟ್ ವೇವ್ಸ್
ಉತ್ತಮ ಅಲೌರೌಂಡರ್-ಅಶ್ರಫ್, ಟೀಮ್ ಹಿಟ್ ವೇವ್ಸ್
ವಿಶೇಷತೆ..
10 ತಂಡಗಳನ್ನು ತಲಾ ಐದರಂತೆ ‘ಎ’ ಮತ್ತು ‘ಬಿ’ ವಿಭಾಗಳನ್ನಾಗಿ ವಿಂಗಡಿಸಿ ಆಡಿಸಲಾಗಿತ್ತು.
ಒಂದೇ ಕ್ರೀಡಾಂಗಣದಲ್ಲಿ ಎರಡು ಪಿಚ್ ಗಳನ್ನು ನಿರ್ಮಿಸಿ ಲೀಗ್ ಮಾದರಿಯಲ್ಲಿ ಆಡಿಸಲಾಗಿತ್ತು.
ಆಯಾ ತಂಡಗಳು ತಂಡದ ಮಾಲಕರು, ಐಕಾನ್ ಆಟಗಾರರನ್ನು ಒಳಗೊಂಡಿದ್ದು, ಬಿಡ್ಡಿಂಗ್(ಪಾಯಿಂಟ್ಸ್ ಆಧಾರದಲ್ಲಿ) ಮೂಲಕ ಇತರ ಆಟಗಾರರನ್ನು ಖರೀದಿಸಲಾಗಿತ್ತು.
ವಿನ್ನರ್ಸ್ ಆದವರಿಗೆ ರೂ.15 ಸಾವಿರ ಹಾಗೂ ಟ್ರೋಫಿ, ರನ್ನರ್ಸ್ ಆದವರಿಗೆ ರೂ.10 ಸಾವಿರ ಹಾಗೂ ಟ್ರೋಫಿ ನೀಡಲಾಗಿತ್ತು