ನಾರಿಯರಿಗೆ ಸಾರಿ(ಸೀರೆ) ಅಂದ್ರೆ ಏನೋ ಪ್ರೀತಿ ಅದರಲ್ಲೂ ರೇಷ್ಮೆ ಸೀರೆ ಅಂದ್ರೆ ಸ್ವಲ್ಪ ವ್ಯಾಮೋಹ ಹೆಚ್ಚು. ನೀರೆಯರ ನೆಚ್ಚಿನ ಸೀರೆ ಅಂದ್ರೆ ಅದು ರೇಷ್ಮೆ ಸೀರೆ. ರೇಷ್ಮೆ ಸೀರೆಗೆ ಮನಸೋಲದ ಹೆಂಗಳೆಯರೇ ಇಲ್ಲ. ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್ ಹಿಂದಿನಿಂದಲೂ ಇದೆ. ಇದು ಔಟ್ ಆಫ್ ಫ್ಯಾಷನ್ ಆಗುವ ಮಾತೇ ಇಲ್ಲ. ಹಾಗಾಗಿಯೇ ರೇಷ್ಮೆ ಬಟ್ಟೆಗಳು ಕೂಡ ದುಬಾರಿ.

ರೇಷ್ಮೆ ಸೀರೆ ಮಹಿಳೆಯರ ಮನಸಲ್ಲಿ ಟಾಪ್ ಸ್ಥಾನದಲ್ಲಿದೆ. ಮದುವೆ, ಹಬ್ಬ, ವಿಶೇಷ ಕಾರ್ಯಕ್ರಮ ಯಾವದ್ದೇ ಆಗಲಿ, ರೇಷ್ಮೆ ಸೀರೆ ಇಲ್ಲದೆ ಮುಗಿಯೋದೇ ಇಲ್ಲ. ಆದರೆ ಇಂತಹ ನಾಜೂಕು ಬಟ್ಟೆಗಳನ್ನು ಸರಿಯಾದ ತೊಳೆಯುವ ಹಾಗೂ ಸಂಗ್ರಹಿಸುವ ವಿಧಾನಗಳನ್ನು ಅನುಸರಿಸದಿದ್ದರೆ ಸೀರೆಯ ಬಣ್ಣ, ಹೊಳಪು, ಮತ್ತು ಆಕರ್ಷಕತೆ ಶೀಘ್ರದಲ್ಲೇ ಕಳೆದುಹೋಗಬಹುದು.

ಸೀರೆಯ ಲೇಬಲ್ ಪರಿಶೀಲನೆ ಮಾಡಿಕೊಳ್ಳಿ
ಸೀರೆ ಖರೀದಿ ಮಾಡಿದಾಗ ಅದರಲ್ಲಿ ನೀಡಲಾದ ‘ವಾಷ್ ಇನ್ಸ್ಟ್ರಕ್ಷನ್’/ಲೇಬಲ್ ನೋಡಿ ತೊಳೆಯುವ ವಿಧಾನ ತೀರ್ಮಾನಿಸಿ. ಕೆಲವೊಂದು ರೇಷ್ಮೆ ಸೀರೆಗಳು ‘ಡ್ರೈ ಕ್ಲೀನ್ ಓನ್ಲಿ’ ಆಗಿರುತ್ತವೆ. ಸಾಬೂನಿನಿಂದ ತೊಳೆಯುವುದು ಕೆಲವು ಬಟ್ಟೆಗಳ ಹೊಳಪನ್ನು ನಶಿಸುಮಾಡಬಹುದು.
ತಣ್ಣೀರು ಬಳಸಿ ತೊಳೆಯಿರಿ
ಬಿಸಿನೀರಿನಿಂದ ರೇಷ್ಮೆ ಸೀರೆ ತೊಳೆಯುವುದು ಅತಿ ದೊಡ್ಡ ತಪ್ಪು. ಬಣ್ಣ ಮಸುಕಾಗುವುದು, ಸೀರೆಯ ನಯವಾದ ತಂತುಗಳು ತೇವಕ್ಕೆ ಹಾಳಾಗಬಹುದು. ತಣ್ಣೀರಿನಲ್ಲಿ ಸೀರೆ ನೆನೆಸಿದ ನಂತರ ನಿಧಾನವಾಗಿ ಕೈಯಿಂದ ತೊಳೆಯಬೇಕು.

ವಿನೇಗರ್ ಬಳಸಿ ಮೃದುವಾಗಿ ಶುದ್ಧಗೊಳಿಸಿ
ಒಂದು ಬಕೆಟ್ ತಣ್ಣೀರಿಗೆ 2 ಚಮಚ ವೈನ್ ವಿನೇಗರ್ ಸೇರಿಸಿ. ಈ ದ್ರಾವಣದಲ್ಲಿ ಸೀರೆ 10 ನಿಮಿಷಗಳ ಕಾಲ ಇಡಿ. ಇದರಿಂದ ಸೀರೆ ಮೇಲಿನ ತೈಲದ ಕಲೆಗಳು ಅಥವಾ ದುರ್ಗಂಧ ದೂರವಾಗುತ್ತದೆ. ನಂತರ ಶುದ್ಧ ನೀರಿನಲ್ಲಿ ತೊಳೆಯಿರಿ.
ಸೂರ್ಯನ ಬೆಳಕಿಗೆ ಬೇಡ – ನೆರಳಲ್ಲಿ ಒಣಗಿಸಿ
ಸೀರೆ ತೊಳೆದ ನಂತರ ಗಟ್ಟಿಯಾಗಿ ಹಿಂಡಬೇಡಿ. ಗಾಳಿಯಿರುವ ನೆರಳಿನಲ್ಲಿ ಒಣಗಿಸಬೇಕು. ನೇರ ಬಿಸಿಲು ಬಣ್ಣವನ್ನು ಹಾಳುಮಾಡುತ್ತದೆ.
ಹತ್ತಿ ಬಟ್ಟೆಯಲ್ಲಿ ಸುತ್ತಿ ಸಂಗ್ರಹಿಸಿ
ಸೀರೆ ನೇರವಾಗಿ ಇತರ ಉಡುಪುಗಳೊಂದಿಗೆ ಇಡಬಾರದು. ಹತ್ತಿ ಬಟ್ಟೆಯಲ್ಲಿ ಸುತ್ತಿ, ಮಡಚಿ ಇಡಬೇಕು. ಈ ವಿಧಾನವು ರೇಷ್ಮೆಯ ಮೇಲೆ ಸುಕ್ಕು ಅಥವಾ ಕೀಟಗಳ ಹಾನಿಯಿಂದ ರಕ್ಷಣೆ ನೀಡುತ್ತದೆ.
https://lnk.ink/VabhG
https://lnk.ink/TAftA
https://lnk.ink/uPK3p
https://lnk.ink/LMs2N