ʼಎಲ್ಲಾ ಸಂಘಸಂಸ್ಥೆ ಪ್ರೋತ್ಸಾಹ ಕೊಟ್ಟಿದ್ದಾರೆʼ- ಸುದ್ದಿ ಸಂದರ್ಶನದಲ್ಲಿ ಸಂತ್ರಸ್ಥೆಯ ತಾಯಿ

0

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆಯ ತಾಯಿ ಸುದ್ದಿ ಚಾನೆಲ್‌ ಗೆ ಸಂದರ್ಶನ ನೀಡಿ ಮಾತನಾಡಿ, ಈ ಘಟನೆಯ ‘ಆರಂಭದಲ್ಲಿ ನನಗೆ ಯಾರ ಬೆಂಬಲವೂ ಇರಲಿಲ್ಲ’ ನನ್ನ ಹಿಂದೆ ಯಾರೂ ಇಲ್ಲ ಎಂದು ತಿಳಿದು ಪೊಲೀಸರೂ ಸ್ಲೋ ಮಾಡಿದ್ರು’ ಆದರೆ ಬಳಿಕ ಎಲ್ಲಾ ಸಂಘಟನೆಗಳು ಸಹಕಾರ ನೀಡಿದ್ದಾರೆ.

‘ಆರೋಪಿ ಪೊಲೀಸ್ ವಶವಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ’ ಆ ಬಳಿಕ ಪೊಲೀಸರು ನಾವು ಹೇಳುವಾಗ ಸ್ಟೇಷನ್‌ ಗೆ ಬನ್ನಿ ಎಂದು ತಿಳಿಸಿದ್ದಾರೆ. ಬೇರೇನೂ ಮಾಹಿತಿ ಸಿಕ್ಕಿಲ್ಲ. ಎಲ್ಲಾ ಸಂಘಸಂಸ್ಥೆ ಪ್ರೋತ್ಸಾಹ ಕೊಟ್ಟಿದ್ದಾರೆ.ಆರಂಭದಲ್ಲಿ ಪೊಲೀಸರು ರಾಜಿ ಪಂಚಾಯತಿಯಿಂದ ಏನು ಹೇಳಲಿಲ್ಲ. ಆ ಬಳಿಕ ನಡೆದ ಘಟನೆಯಿಂದ ಎಫ್‌ ಐ ಆರ್‌ ದಾಖಲು ಮಾಡಿದ್ದೇವೆ.ಆ ಬಳಿಕ ತುಂಬಾ ಸಂಘ ಸಂಸ್ಥೆ ಸಹಾಯ ಮಾಡಿದ್ದಾರೆ. ನ್ಯಾಯ ಕೊಡಿಸಲು ಅವರ ಪಾತ್ರ ಮಹತ್ವದ್ದು, ಶರಣ್‌ ಪಂಪ್‌ ವೆಲ್‌ ಅವರು ನಮಗೆ ಎರಡು ಪಾರ್ಟಿ ಬೇಕು ಎಂದಿದ್ದರು. ಆದರೆ ಈಗ ಒಳ್ಳೆಯ ಸಪೋರ್ಟ್‌ ಇದೆ ಎಂದರು. ‘ಅವನಿಗೆ ಶಿಕ್ಷೆ ಬೇಡ, ಮದುವೆ ಮಾಡಿಸಿ’ ಮದುವೆಯ ನಂತರವೂ ನನಗೆ ಅವರಲ್ಲಿ ನಂಬಿಕೆಯಿಲ್ಲ.ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂಬ ನಂಬಿಕೆಯಿಲ್ಲ’.ಮುಂದೆಯೂ ನನಗೆ ಎಲ್ಲಾ ಸಂಘಟನೆ, ಪ್ರಮುಖರ ಬೆಂಬಲ ಬೇಕು.ಹುಡುಗನ ಮನೆಯಲ್ಲಿ ಮಗು, ತಾಯಿ ಚೆನ್ನಾಗಿರಬೇಕು ಎಂದರು. ವಿಶ್ವಕರ್ಮ ಸಂಘಟನೆ, ಪ್ರತಿಭಾ ಕುಳಾಯಿರವರ ಸಹಕಾರ ತುಂಬಾ ಇದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here