ಪುತ್ತೂರು: ವಿದ್ಯಾರ್ಥಿಗಳಿಗೆ ವಿಚಾರಗಳನ್ನು ಕೊಡಬೆಡಿ, ವಿಚಾರ ಮಾಡುವುದನ್ನು ಕಲಿಸಬೇಕಿದೆ. ವಿದ್ಯಾರ್ಥಿಯ ವಿವೇಕವನ್ನು ಜಾಗೃತಗೊಳಿಸಿ ಸ್ವತಂತ್ರವಾಗಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಶಿಕ್ಷಕರಷ್ಟೇ ಪಾತ್ರ ಪೋಷಕರದ್ದಾಗಿದೆ ಎಂದು ವಿವೇಕಾನಂದ ಕ.ಮಾ ಶಾಲೆಯ ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಮಾತನಾಡಿದರು.
2025-26ನೇ ಶೈಕ್ಷಣಿಕ ಸಾಲಿನ ಪ್ರಾರಂಭದ ವಿಭಾಗಶಃ ಪೋಷಕರ ಸಭೆಯಲ್ಲಿ ವಾರ್ಷಿಕ ಯೋಜನೆಗಳ ಕುರಿತು ಮಾತನಾಡಿದ ಅವರು, ಶಾಲೆ- ಮನೆಯ ನಡುವಿನ ಸಹಸಂಬಂಧದ ಮಹತ್ವವು ಮಗುವಿನ ಪರಿಣಾಮಕಾರಿ ಕಲಿಕೆಗೆ ಅತೀ ಅಗತ್ಯ ಎಂದರು.

ಪೋಷಕರಲ್ಲಿ ಒಬ್ಬರಾದ ರಘುರಾಜ್ ಉಬರಡ್ಕ ಮಾತನಾಡಿ, ಸಭೆಯು ಪೋಷಕರ ಹಾಗೂ ಶಿಕ್ಷಕರ ಕಲಿಕೆಗೆ ಅತೀ ಅಗತ್ಯವಾದ ಕಲಿಕಾ ವೇದಿಕೆಯಾಗಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಎಂ ಮಾತನಾಡಿ, ಸಭೆಯ ಸಂವಾದ ಭಾಗದಲ್ಲಿ ಪೋಷಕರು ಪ್ರಶ್ನೆ ಕೇಳುತ್ತಾ, ಸಲಹೆಗಳನ್ನು ನೀಡುತ್ತಾ ಸಕ್ರಿಯರಾಗಿ ಭಾಗವಹಿಸಿರುವುದು ಪರಿಣಾಮಕಾರಿ ಪೋಷಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು. ಪ್ರತೀ ವಿಭಾಗಗಳ ವಿಷಯಾಧಾರಿತ ಶಿಕ್ಷಕರ ಪರಿಚಯವನ್ನು ಮಾಡಲಾಯಿತು.ಶಾಲಾ ಶಿಕ್ಷಕ-ರಕ್ಷಕ ಸಮಿತಿ, ಅನ್ನಪೂರ್ಣಾ ಸಮಿತಿ, ಮಾತೃಭಾರತಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆಯಿತು.