ಪುತ್ತೂರು: ವಕೀಲರಾಗಿರುವ ಕೃಷ್ಣಪ್ರಸಾದ್ ನಡ್ಸಾರ್ ಅವರ ನೂತನ ಕಚೇರಿ ಅನಿಕೇತನ ಲಾ ಛೇಂಬರ್ಸ್ ಜು.7ರಂದು ಪುತ್ತೂರು ಎಂ.ಎಸ್ ರಸ್ತೆಯ ಶ್ರೀ ರಾಘವೇಂದ್ರ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಂಡಿತು.

ಕಜೆ ಲಾ ಛೇಂಬರ‍್ಸ್‌ನ ವಕೀಲರಾಗಿರುವ ಮಹೇಶ ಕಜೆ ಮತ್ತು ದೀಪಿಕಾ ಕಜೆ ದಂಪತಿ ನೂತನ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಮಹೇಶ ಕಜೆ ಅವರು ಮಾತನಾಡಿ ಕೃಷ್ಣಪ್ರಸಾದ್ ಅವರ ವೃತ್ತಿ ಜೀವನ ಯಶಸ್ವಿಯಾಗಿ ಬೆಳಗಲಿದೆ.
ಪರಿಮಿತಿ ಇಲ್ಲದ ಅನಿಕೇತನವು ಕಾನೂನಿನ ಕ್ಷೇತ್ರದಲ್ಲೂ ನ್ಯಾಯವನ್ನು ಧರ್ಮಾದಾರಿತವಾಗಿ ನೀಡಲಿ ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿವಿಲ್ ಲಾ ಛೇಂಬರ‍್ಸ್‌ನ ಸೂರ್ಯನಾರಾಯಣ ಎನ್ ಕೆ ಮಾತನಾಡಿ, ವಕೀಲ ವೃತ್ತಿಯಲ್ಲಿ ನಿಮ್ಮ ಸಹಜವಾದ ವಿನಯವಂತಿಕೆ ಇದೇ ರೀತಿಯಲ್ಲಿ ಮುಂದುವರಿಯಲಿ, ಅದೇ ರೀತಿ ಬೇಕಾದಲ್ಲಿ ಶಿಸ್ತುಬದ್ದವಾದ ನಡೆಯಿರಲಿ ಎಂದು ಹೇಳಿದರು.
ಭಾಲವಾಲಿಕರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿರುವ ನಿವೃತ್ತ ಶಿಕ್ಷಕ ಬಾಲಕೃಷ್ಣ ನಾಯಕ್ ಅಜೇರು ಅವರು ಮಾತನಾಡಿ, ನಗುಮೊಗದ ನ್ಯಾಯಕ್ಕೆ ಸರಿಯಾದ ಮಾರ್ಗವನ್ನು ತೋರಿಸುವ ಕೃಷ್ಣಪ್ರಸಾದ್ ನಡ್ಸಾರ್ ಅವರ ವೃತ್ತಿ ಜೀವನ ಉತ್ತಮವಾಗಿ ಬೆಳಗಲಿ ಎಂದು ಹಾರೈಸಿದರು. ವಕೀಲರ ಸಂಘದ ಅಧ್ಯಕ್ಷ ಜಿ ಜಗನ್ನಾಥ ರೈ ಅವರು ಮಾತನಾಡಿ, ಕೃಷ್ಣಪ್ರಸಾದ್ ನಡ್ಸಾರ್ ಅವರು ಹೋದಲ್ಲಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಅವರ ವಕೀಲ ವೃತ್ತಿ ಜೀವನ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಕೀಲ ಶ್ರೀಗಿರೀಶ ಮಳಿ ಅವರು ಮಾತನಾಡಿ, ಕೃಷ್ಣಪ್ರಸಾದ್ ನಡ್ಸಾರ್ ಅವರು ಹೋದ ಕ್ಷೇತ್ರವನ್ನು ಸೇವೆಯ ರೂಪದಲ್ಲಿ ನೋಡಿದ್ದಾರೆ. ಸೇವೆಯ ಕೈಕಂರ್ಯ ಕಷ್ಟದಲ್ಲಿರುವವರಿಗೆ ಸಿಗಲಿ. ಹಿರಿಯರ ಆಶೀರ್ವಾದ ನಿಮಗೆ ಸದಾ ಇರಲಿದೆ ಎಂದು ಹೇಳಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಚ್ಚುತ ನಾಯಕ್, ವಕೀಲರಾದ ಕೃಪಾಶಂಕರ್, ಚಿದಾನಂದ ಬೈಲಾಡಿ, ದಿವಾಕರ ಕೆ ನಿಡ್ವಣ್ಣಾಯ, ಭಾಸ್ಕರ್ ಕೋಡಿಂಬಾಳ, ಎನ್ ಎಸ್ ಮಂಜುನಾಥ್, ಶಿವಪ್ರಸಾದ್, ಕುಮಾರ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಡಾ. ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು. ಅನಿಕೇತನ ಲಾ ಛೇಂಬರ್ಸ್‌ನ ಕೃಷ್ಣಪ್ರಸಾದ್ ನಡ್ಸಾರ್ ದಂಪತಿ ಅತಿಥಿಗಳನ್ನು ಬರಮಾಡಿಕೊಂಡರು.