ಪುತ್ತೂರು: ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಸಾಲಿನ ವಿದ್ಯಾರ್ಥಿ ಸರ್ಕಾರದ ಮಂತ್ರಿಮಂಡಲ ರಚಿಸಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ ಕವನ್. ಬಿ 6ನೇ ತರಗತಿ ಹಾಗೂ ಉಪಮುಖ್ಯಮಂತ್ರಿಯಾಗಿ ಅನ್ವಿತ್ ಕೆ ಎಲ್ 5ನೇ ತರಗತಿ ಇವರು ಚುನಾಯಿತರಾಗಿರುತ್ತಾರೆ. ಶಿಸ್ತು/ಶಿಕ್ಷಣ ಮುಖ್ಯಮಂತ್ರಿಯಾಗಿ ಅದ್ವಿಕ್ ಬಂಜನ್ 6ನೇ ತರಗತಿ , ಸಾಂಸ್ಕೃತಿಕ ಮಂತ್ರಿಯಾಗಿ ಆಧ್ಯ. ಎ 6ನೇ ತರಗತಿ ,ಕ್ರೀಡಾ ಮಂತ್ರಿಯಾಗಿ ಶ್ರೀಶ ಆಚಾರ್ಯ 6ನೇ ತರಗತಿ ತರಗತಿ ಹಾಗೂ ಆರೋಗ್ಯ ಮತ್ತು ನೈರ್ಮಲ್ಯಮಂತ್ರಿಯಾಗಿ ಗನ್ವಿತ್ ಹೆಚ್ 5ನೇ ತರಗತಿ ಮತ್ತು ವಿರೋಧ ಪಕ್ಷದ ನಾಯಕನಾಗಿ ವಿಖ್ಯಾತ್ ಎನ್ .ಗೌಡ 6ನೇ ತರಗತಿ ಇವರು ಆಯ್ಕೆಯಾಗಿರುತ್ತಾರೆ.
ಎಲೆಕ್ಟ್ರಾನಿಕ್ ವೋಟಿಂಗ್ ಪದ್ಧತಿ ಮೂಲಕ ಮತ ಚಲಾವಣೆಯನ್ನು ನಡೆಸಲಾಯಿತು. ಶಿಕ್ಷಕಿಯರಾದ ರಾಧಾ ಹಾಗೂ ಸುಚಿತ ರವರು ಚುನಾವಣಾಧಿಕಾರಿಗಳಾಗಿದ್ದರು, ಹಾಗೂ ಶಿಕ್ಷಕ ವೃಂದದವರು ಸಹಕರಿಸಿದರು.