




ಪುತ್ತೂರು:ಪುತ್ತೂರು ಸಂಸ್ಕಾರ ಭಾರತೀ ವತಿಯಿಂದ ಗುರುಪೂರ್ಣಿಮೆ ಪ್ರಯುಕ್ತ ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ ಅವರಿಗೆ ಬಪ್ಪಳಿಗೆಯಲ್ಲಿರುವ ಅವರ ಸ್ವಗೃಹದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.



ಕಾರ್ಯಕ್ರಮದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿಯವರು ಉಪಸ್ಥಿತರಿದ್ದು, ಪ್ರಾಸ್ತಾವಿಕ ನುಡಿಗಳನ್ನಾಡಿ, ದಾಸಪ್ಪ ರೈಯವರಿಗೆ ಶಾಲು ಹೊದಿಸಿ ಗೌರವಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ದತ್ತಾತ್ರೇಯ ರಾವ್ ಅವರು ಗುರುವಂದನಾ ಪತ್ರವನ್ನು ವಾಚಿಸಿ ಸಮರ್ಪಿಸಿದರು. ಪ್ರಾಂತ ಉಪಾಧ್ಯಕ್ಷೆ ರೂಪಲೇಖ ಮತ್ತು ವಿದ್ವಾನ್ ಗೋಪಾಲಕೃಷ್ಣರು ಹಣ್ಣು, ಹೂ, ತಾಂಬೂಲದೊಂದಿನ ಗೌರವ ಕಾಣಿಕೆಯನ್ನಿತ್ತು ಗೌರವಿಸಿದರು. ಪ್ರಾಂತ ಸಾಹಿತ್ಯ ಸಂಚಾಲಕಿ ಪದ್ಮಾ ಆಚಾರ್ಯ ಅವರು ದಾಸಪ್ಪ ರೈ ಅವರ ಸಂದರ್ಶನವನ್ನು ನಡೆಸಿಕೊಟ್ಟರು. ಮನೆ ಮಂದಿ ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





ವಿದುಷಿ ಪ್ರೀತಿಕಲಾ ಅವರ ನೇತೃತ್ವದಲ್ಲಿ ಧ್ಯೇಯಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ವಾನ್ ದೀಪಕ್ ಕುಮಾರ್ ಸ್ವಾಗತಿಸಿದರು. ಜಿಲ್ಲಾ ಸಾಹಿತ್ಯ ಸಂಚಾಲಕಿ ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿ, ವಿದುಷಿ ನಯನಾ ವಿ.ರೈ ವಂದಿಸಿದರು.









