ಉಪ್ಪಿನಂಗಡಿ: ಇಲ್ಲಿನ ವನಿತಾ ಸಮಾಜದ ವತಿಯಿಂದ 28ನೇ ವರ್ಷದ ಶ್ರೀ ವರಮಹಾಲಕ್ಷೀ ವ್ರತದ ಆಮಂತ್ರಣ ಪತ್ರಿಕೆಯನ್ನು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವನಿತಾ ಸಮಾಜದ ಪದಾಧಿಕಾರಿಗಳಾದ ಉಷಾ ಮುಳಿಯ, ಗೀತಾಲಕ್ಷೀ ತಾಳ್ತಜೆ, ಪುಷ್ಪಲತಾ, ಶ್ಯಾಮಲಾ ಶೆಣೈ, ಜೋತಿ ಹೇರಂಭ ಶಾಸ್ತ್ರೀ, ಪ್ರಮುಖರಾದ ಸುರೇಶ ಅತ್ರಮಜಲು, ಜಯಂತ ಪೊರೋಳಿ, ಹೇರಂಭ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.