ಪುತ್ತೂರು: ನರಿಮೊಗರು, ಮುಂಡೂರು, ಶಾಂತಿಗೋಡು ವ್ಯಾಪ್ತಿಯಲ್ಲಿನ ಮರಾಟಿ ಸಮಾಜ ಸೇವಾ ಸಂಘ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ಅಧ್ಯಕ್ಷರಾಗಿ ಮಹಾಲಿಂಗ ನಾಯ್ಕ ನರಿಮೊಗರು, ಕಾರ್ಯದರ್ಶಿಯಾಗಿ ಕೃಷ್ಣ ನಾಯ್ಕ, ಕೋಶಾಧಿಕಾರಿಯಾಗಿ ಈಶ್ವರ್ ಅಜಲಾಡಿರವರು ಪುನರಾಯ್ಕೆಗೊಂಡಿದ್ದಾರೆ.
ಉಪಾಧ್ಯಕ್ಷರುಗಳಾಗಿ ಕೊರಗಪ್ಪ ನಾಯ್ಕ ಕಲ್ಲಮ, ಗೋಪಾಲ ನಾಯ್ಕ ಎಲಿಕ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಪುಷ್ಪಾ ಸುಂದರ ನಾಯ್ಕ ಮಾಯಂಗಾಲ, ಕ್ರೀಡಾ ಕಾರ್ಯದರ್ಶಿಯಾಗಿ ಶೀನಪ್ಪ ನಾಯ್ಕ ನೆಕ್ಕಿಲು, ಸಂಘಟನಾ ಕಾರ್ಯದರ್ಶಿಗಳಾಗಿ ಯೋಗೀಶ್ ನಾಯ್ಕ ಶಾಂತಿಗೋಡು, ಕೊರಗಪ್ಪ ನಾಯ್ಕ ಕೊಡಂಕಿರಿ, ಶ್ರೀಮತಿ ಶಶಿಕಲಾ ಬಿ.ಕೆ, ಶ್ರೀಮತಿ ಪ್ರಮೀಳಾ ಶಿವಪ್ರಸಾದ್, ಮಹೇಶ್ ಹಿಂದಾರುರವರು ಆಯ್ಕೆಗೊಂಡಿದ್ದು ಬಳಿಕ 21 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ಆರಿಸಲಾಯಿತು.
