ಪುತ್ತೂರು: ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗಾಳಾಯಿ ಶಾಲೆಯಲ್ಲಿ ಜು.15ರಂದು ಬೆಥನಿ ಸಂಸ್ಥಾಪನಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ವಿಶೇಷವಾಗಿ, ಸಂಸ್ಥಾಪಕರಾದ ಪೂಜ್ಯಗುರು, ದೇವರ ಸೇವಕರಾದ ರೇಮಂಡ್ ಫ್ರಾನ್ಸಿಸ್ ಕಮಿಲಾಸ್ ಮಸ್ಕರೇನ್ಹಸ್ ಅವರ ಜೀವನ ಮೌಲ್ಯಗಳನ್ನು ಬಿಂಬಿಸುವ ನೃತ್ಯರೂಪಕವು ಎಲ್ಲರ ಗಮನ ಸೆಳೆಯಿತು.

ಅಧ್ಯಕ್ಷತೆ ವಹಿಸಿದ್ದ ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾ ಬಿ.ಎಸ್. ಮಾತನಾಡಿ, ಸಂಸ್ಥಾಪನಾ ದಿನದ ಮಹತ್ವ ಕುರಿತು ಸಂದೇಶ ನೀಡಿದರು. ಅಲ್ಲದೆ, ವಿದ್ಯಾರ್ಥಿಗಳಿಗೆ ರಸಪ್ರಶ್ನೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿದರು.
ವಿದ್ಯಾರ್ಥಿಗಳಾದ ಪೂರ್ವಿಕ ಮತ್ತು ಅನನ್ಯ ಕಾರ್ಯಕ್ರಮ ನಿರೂಪಿಸಿ ಅಲೀಮಾ ಸ್ವಾಗತಿಸಿ, ರಿಶಲ್ ರೈ ವಂದಿಸಿದರು.
