ಪುತ್ತೂರು: ದರ್ಬೆ ಶುಭ ಬುಕ್ ಸ್ಟೋರ್ ಎದುರುಗಡೆಯ ಮೊದಿನ್ ಕಾಂಪ್ಲೆಕ್ಸ್‌ನಲ್ಲಿ ಮಹಿಳೆಯರ ಉಡುಪುಗಳ ಮಳಿಗೆ “ಫ್ಯಾಶನ್ ತಾರಾ” ಜು.20ರಂದು ಶುಭಾರಂಭಗೊಂಡಿತು.

ಮಾಲಕರ ತಾಯಿ ಕೌಸರ್ ಬಾನು ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆ ಉದ್ಘಾಟಿಸಿ ಶುಭಹಾರೈಸಿದರು. ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಫಜಲ್ ಮಹಮ್ಮದ್, ಸಿರಾಜ್ ಅಹಮ್ಮದ್, ಆಶೀವಾದ ಎಂಟರ್‌ಪ್ರೈಸಸ್‌ನ ಸುಲ್ತಾನ್, ಇರ್ಫಾನ್ ಮಹಮ್ಮದ್, ಜಹೀರ್ ಅಹಮ್ಮದ್, ನಸೀರ್ ಪಡೀಲ್ ಉಪಸ್ಥಿತರಿದ್ದರು.
ಮಾಲಕರಾದ ಶೇಖ್ ಸಲ್ಮಾನ್ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ಮುತ್ತಿನ ನಗರ ಪುತ್ತೂರಿನ ಫ್ಯಾಶನ್ ಲೋಕದಲ್ಲಿ ಬಟ್ಟೆಗಳ ಹೊಸ ಮಳಿಗೆ ಬಂದಿದ್ದು ಮಹಿಳೆಯರ ವಿವಿಧ ವಿನ್ಯಾಸದ ಬಟ್ಟೆಗಳ ಸಂಗ್ರಹವಿದೆ. ಪ್ರಖ್ಯಾತ ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಹೊಸ ಹೊಸ ಡಿಸೈನ್‌ನ ಸಾರಿಗಳು, ಟಾಪ್ಸ್‌ಗಳು, ಸಲ್ವಾರ್‌ಗಳು, ಲೆಹಂಗಾ ಸೇರಿದಂತೆ ಮಹಿಳೆಯರ ಎಲ್ಲಾ ರೀತಿಯ ಉಡುಪುಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ಗ್ರಾಹಕರು ಆಗಮಿಸಿ ಸಹಕರಿಸಬೇಕೆಂದು ಹೇಳಿದರು.
ಬಿಗ್‌ಸೇಲ್, ಸ್ಪೆಷಲ್ ಆಫರ್
ಮಳಿಗೆಯ ಶುಭಾರಂಭದ ಪ್ರಯುಕ್ತ ಬಿಗ್ ಸೇಲ್ ಸ್ಪೆಷಲ್ ಆಫರ್ ಆಯೋಜಿಸಲಾಗಿದೆ. ಕೇವಲ ರೂ.499ಕ್ಕೆ 6 ಟಾಪ್ಸ್, ಬ್ರೈಡಲ್ ಲೆಹಂಗ ಕೇವಲ ರೂ.999ರಿಂದ ಆರಂಭ, ಎರಡು ಅನ್‌ಸ್ಟಿಚ್‌ಡ್ ಕಾಟನ್ ಸಲ್ವಾರ್ ಸೂಟ್ಸ್ ಖರೀದಿಗೆ ಒಂದು ಅನ್‌ಸ್ಟಿಚ್‌ಡ್ ಕಾಟನ್ ಸಲ್ವಾರ್ ಸೂಟ್ಸ್ ಉಚಿತ ದೊರೆಯಲಿದೆ. ಕಿಡ್ಸ್ ವಿಯರ್ ರೂ.69ರಿಂದ ಮತ್ತು ಲೇಡಿಸ್ ಕುರ್ತೀಸ್ ರೂ.99ರಿಂದ ಲಭ್ಯವಿದೆ. ಅಲ್ಲದೆ ರಿಯಾಯಿತಿ ದರದಲ್ಲಿ ವಿವಿಧ ಬಟ್ಟೆಗಳ ಖರೀದಿ ಲಭ್ಯವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಮಾಲಕರಾದ ಶೇಖ್ ಸಲ್ಮಾನ್ ತಿಳಿಸಿದ್ದಾರೆ.