ಕಡಬ: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕಡಬ ಶಾಖೆಯಲ್ಲಿ ಕಳೆದ 14 ವರ್ಷಗಳಿಂದ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಸವಣೂರು ಶಾಖೆಗೆ ವರ್ಗಾವಣೆಗೊಂಡ ವಿಜಯ್ಕುಮಾರ್ ರೈಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕಡಬ ಶಾಖೆಯಲ್ಲಿ ಆ.2ರಂದು ನಡೆಯಿತು.

ಕಡಬ ಶಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಕಡಬ ಜನತೆಯ ಮೆಚ್ಚುಗೆಗೆ ಕಾರಣಕರ್ತರಾದ ವಿಜಯ್ಕುಮಾರ್ ರೈಯವರನ್ನು ಕಡಬದ ಉದ್ಯಮಿಗಳಾದ ಶ್ರೀ ದೇವಿ ಟಯರ್ ವರ್ಕ್ಸ್ ಮಾಲಕರಾದ ಶರತ್ ಪಂಜೊಡಿ, ಪ್ರದೀಶ್ ಕುಮಾರ್, ಶ್ರೀ ಸಾಯಿ ಜನರಲ್ ಸ್ಟೋರ್ ಮಾಲಕ ಕರುಣಾಕರ ಪೂಜಾರಿ, ತನು ಮೊಬೈಲ್ ಸೆಂಟರ್ ಮಾಲಕ ರಜಾಕ್, ಕಡಬ ಸಿ.ಎ.ಬ್ಯಾಂಕ್ ಸಿಬ್ಬಂದಿ ಆನಂದ ಗೌಡ ಕೋಂಕ್ಯಾಡಿ, ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕಡಬ ಶಾಖಾ ಸಿಬ್ಬಂದಿಗಳಾದ ಅಶ್ವಿನ್ ರೈ, ಸೌಮ್ಯ ಎ, ಜಿತೇಶ್ ಕುಮಾರ್, ನಾಗೇಶ್ ಕೊಲ್ಲೆಸಾಗು ಹಾಗೂ ಕಡಬ ಶಾಖೆಗೆ ನೂತನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡ ನಿಶಾ ರೈಯವರು ಅಭಿನಂದಿಸಿದರು. ವರ್ಗಾವಣೆಗೊಂಡ ವಿಜಯಕುಮಾರ್ ರೈ ಹಾಗೂ ಅವರ ಪತ್ನಿ ಅರ್ಚನಾ ರೈ, ಪುತ್ರಿ ತಸ್ವಿ ರೈ ಅವರಿಗೆ ಶಾಲು, ಹಾರ, ಅಭಿನಂದನಾ ಪತ್ರ, ಉಡುಗೊರೆ, ಫಲಪುಷ್ಪ ನೀಡಿ ಗೌರವಿಸಿ ಬೀಳ್ಕೊಡಲಾಯಿತು.