ಪುತ್ತೂರು: ಆಗಸ್ಟ್ 3 ರಂದು ಭಾನುವಾರ ಪುತ್ತೂರಿನ ಶ್ರೀ ಸತ್ಯಸಾಯಿ ಮಂದಿರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದಾಧಿಕಾರಿಗಳ,ಸಮಿತಿ ಸಂಚಾಲಕರ ಮತ್ತು ಸಮಿತಿ ಪದಾಧಿಕಾರಿಗಳ ವಿಶೇಷ ಸಮಾವೇಶ ಯಶಸ್ವಿಯಾಗಿ ಜರುಗಿತು.
ಸಮಾವೇಶವನ್ನು ಹಿರಿಯರಾದ ಪದ್ಮನಾಭ ನಾಯಕರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಾಯೀಶ್ವರಿ ಮತ್ತು ನಾರಾಯಣ ರಾವ್ ವೈದಿಕ ಪ್ರಾರ್ಥನೆಗೈದರು. ಜಿಲ್ಲಾ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ಟರು ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಪ್ರಸನ್ನ ಭಟ್ಟರು ಸ್ವಾಮಿಯ ಜನ್ಮಶತಾಬ್ದಿ ಚಟುವಟಿಕೆಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು. ನಂತರ ಸಂಸ್ಥೆಯ ಎಲ್ಲ ವಿಭಾಗಗಳ ಜಿಲ್ಲಾ ಹಾಗೂ ಸಮಿತಿ ಪದಾಧಿಕಾರಿಗಳ ಗುಂಪು ಚರ್ಚೆ ನಡೆಯಿತು. ಬಳಿಕ ಚರ್ಚೆಯ ಬಗ್ಗೆ ಜಿಲ್ಲಾ ಸಂಯೋಜಕರು ಮತ್ತು ಸಮಿತಿ ಸಂಚಾಲಕರು ಮಾತನಾಡಿದರು.
ಆಸ್ಪತ್ರೆ ಸೇವಾ ರಾಜ್ಯದ ಮುಖ್ಯಸ್ಥರಾದ ಚಂದ್ರಶೇಖರ ನಾಯಕರು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಅಧ್ಯಕ್ಷ ಭಾಷಣದ ನಂತರ ಕೆ.ಎಸ್ ದಯಾನಂದರು ಧನ್ಯವಾದ ಸಮರ್ಪಣೆಗೈದರು. ರಘುನಾಥ ರೈಯವರು ಕಾರ್ಯಕ್ರಮ ನಿರೂಪಿಸಿದರು. ಮಂಗಳಾರತಿಯೊಂದಿಗೆ ಸಭೆ ಮುಕ್ತಾಯಗೊಂಡಿತು. 110 ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.