ಪುತ್ತೂರು: ಮುಂಡೂರು ಗ್ರಾಮದ ಮರ್ತಡ್ಕ ನಾಡಾಜೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರಕ್ಕೆ ತೀರಾ ಹದಗೆಟ್ಟಿದ್ದು ನಡೆದುಕೊಂಡು ಹೋಗಲು ತೊಂದರೆ ಆಗುತ್ತಿರುವ ಕುರಿತು ಮಾಹಿತಿ ತಿಳಿದ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಅವರು ತಕ್ಷಣವೇ ಸ್ಪಂದಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯ ಹಿರಿಯ ಕಾಂಗ್ರೆಸ್ ಮುಖಂಡ ದೇರಣ್ಣ ಶೆಟ್ಟಿ ಮತ್ತು ವಲೇರಿಯನ್ ಡಿಸೋಜರವರು ಪ್ರವೀಣ್ ಆಚಾರ್ಯ ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರವೀಣ್ ಆಚಾರ್ಯ ಅವರು ತುರ್ತು ಸೇವಾ ಸಮಿತಿ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ 4 ಪಿಕಪ್ ಜಲ್ಲಿ ಮತ್ತು ಕ್ರಷರ್ ಹುಡಿಯನ್ನು ತಂದು ರಸ್ತೆಗೆ ಹಾಕಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯರಾದ ವಲೇರಿಯನ್ ಡಿಸೋಜ, ದೇರಣ್ಣ ಶೆಟ್ಟಿ, ಹರೀಶ್ ಮಡಿವಾಳ, ನಾರಾಯಣ ಕೊಂಬಳ್ಳಿ, ರಮ್ಲ ಕೊಂಬಳ್ಳಿ, ನಾರಾಯಣ ಶೆಟ್ಟಿ, ಜನಾರ್ಧನ ಮರ್ತಡ್ಕ, ಕಿಟ್ಟಣ್ಣ ಶೆಟ್ಟಿ, ರಾಮಣ್ಣ ಶೆಟ್ಟಿ ಮೊದಲಾದವರು ಶ್ರಮದಾನದ ಮೂಲಕ ರಸ್ತೆ ದುರಸ್ತಿಗೆ ಸಹಕರಿಸಿದರು.
ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ವಲಯ ಕಾಂಗ್ರೆಸ್ ಅಧ್ಯಕ್ಷ ಅವರ ಕಾರ್ಯ ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.