ಪುತ್ತೂರು: ನರಿಮೊಗರು ಗ್ರಾಮದ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರರವರು ದ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಭಾಸ್ಕರ್ ಆಚಾರ್ ಹಿಂದಾರು , ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ , ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಹರೀಶ್ ಪುತ್ತೂರಾಯ, ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರು ಮಾತನಾಡುತ್ತಾ ನಾವು ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು ಒಗ್ಗಟ್ಟು ಇಲ್ಲದ ಕಾರಣ. ಸ್ವಾತಂತ್ರ್ಯವನ್ನು ಉಳಿಸಿಕೊಂಡು ಮುಂದುವರೆಯುದು ಅಷ್ಟೇನು ಸುಲಭವಲ್ಲ. ಗಳಿಸಿದ ಸ್ವಾತಂತ್ರ್ಯ
ವನ್ನು ಉಳಿಸಿಕೊಳ್ಳಲು ದೇಹ ಮಾತೆ ಮತ್ತು ದೇಶ ಮಾತೆ ಸಹಕರಿಸಬೇಕು. ನಮ್ಮ ದೇಹದಲ್ಲಿ ರುವ ಆರು ಶತ್ರುಗಳನ್ನು ಜೊತೆಗೆ ಹೊರಗಿನ ಶತ್ರು ಗಳನ್ನು ನಿಯಂತ್ರಣ ದಲ್ಲಿ ಇಟ್ಟು ಕೊಂಡು ದೇಶದ ಪ್ರಗತಿಗಾಗಿ ದುಡಿಯಬೇಕು. ಎಂದು ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಬಗ್ಗೆ ಹುರಿದುಂಬಿಸಿದರು.
ತದನಂತರ ಸಭಾಕಾರ್ಯಕ್ರಮದಲ್ಲಿ ಶಾಲಾಧ್ಯಕ್ಷರು ಮಾತನಾಡುತ್ತಾ ನಮ್ಮ ದೇಶ ಸ್ವಾತಂತ್ರ್ಯದ ಬಳಿಕ ಅಭಿವೃದ್ಧಿ ಹೊಂದಿ ಮುಂದುವರೆದ ರಾಷ್ಟ್ರವಾಗಿದೆ. ಕಳೆದ ವರುಷದಲ್ಲಿ ಭಾಗಿದ ಭಾರತ ಇಂದು ವಿಶ್ವದಲ್ಲಿ ಭವ್ಯ ಭಾರತವಾಗಿ ತಲೆ ಎತ್ತಿದೆ. ಯೋಗದ ಮೂಲಕ ವಿಶ್ವ ಗುರು ಎನಿಸಿ ವಿಶ್ವಕ್ಕೆ ಮಾದರಿಯಾಗಿದೆ ಇದರ ಶ್ಲಾಘನೆ ನಮ್ಮ ಇಂದಿನ ಪ್ರಧಾನಿಗೆ ಸಲ್ಲುತ್ತದೆ. ಎಂದು ಸ್ವಾತಂತ್ರ್ಯ ದಿವಸದ ಶುಭಾಶಯ ತಿಳಿಸಿದರು.
ಶಿಕ್ಷಕರಾದ ರವಿಶಂಕರ್ ಹಾಗೂ ವಿದ್ಯಾರ್ಥಿಗಳಾದ ಜ್ಞಾನ ರೈ, ಅನಘ ರವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಂದ ದೇಶದ ಸ್ವಾತಂತ್ರ್ಯಹೋರಾಟದ ನೆನಪುಗಳನ್ನು ಮೆಲುಕು ಹಾಕುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪ್ರಮೀಳಾ ರವರು ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಾಯಿ ಸಂಚಿತ್, ಪ್ರಥಮ್ ಪ್ರಾರ್ಥಿಸಿದರು. ಶಿಕ್ಷಕಿಯರಾದ ಮುರಳಿಕೃಷ್ಣ ರವರು ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ರವರು ವಂದಿಸಿದರು.