ವಿಟ್ಲ: ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಅವಹೇಳನವನ್ನು ಖಂಡಿಸಿ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಶ್ರೀ ಉಳ್ಳಾಲ್ದಿ ವೈದ್ಯನಾಥೇಶ್ವರ ಹೊಸಮ್ಮ ಅಣ್ಣಪ್ಪ ಪಂಜುರ್ಲಿ ಬ್ರಹ್ಮ ಬೈದರ್ಕಳ ಗರಡಿ ಮತ್ತು ಪರಿವಾರ ದೈವಗಳ ಆಡಳಿತ ಟ್ರಸ್ಟ್ ಬಾಕಿಲ ಗುತ್ತು ಆಡಳಿತ ವತಿಯಿಂದ ಕ್ಷೇತ್ರದ ಅಣ್ಣಪ್ಪ ಸನ್ನಿಧಾನದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಧರ್ಮಸ್ಥಳ ಕ್ಷೇತ್ರದ ವಿರುದ್ದ ಆಗುತ್ತಿರುವ ಅಪಪ್ರಚಾರಕ್ಕೆ ಆದಷ್ಟು ಬೇಗ ಮುಕ್ತಿ ಸಿಗಲಿ ಹಾಗೂ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗದ ರೀತಿಯಲ್ಲಿ ಸತ್ಯಾಸತ್ಯತೆ ಹೊರಬರಲಿ ಎಂದು ಕುಟುಂಬಸ್ಥರು, ಗ್ರಾಮಸ್ಥರು ಸೇರಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ವಸಂತ ಪೂಜಾರಿ, ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ, ಖಜಾಂಜಿ ಸಂಕಪ್ಪ ಪೂಜಾರಿ, ಟ್ರಸ್ಟಿಗಳಾದ ಜನಾರ್ಧನ ಪೂಜಾರಿ, ಸುರೇಶ್ ಸಾಲಿಯಾನ್, ಶೈಲೇಶ್ ಅಗತ್ತಾಡಿ, ಪ್ರಭಾಕರ ಸಾಲ್ಯಾನ್, ಕೃಷ್ಣ ಶಾಂತಿ, ಪುಷ್ಪ, ವಾರಿಜ ವಸಂತ್, ಚಂದ್ರಶೇಖರ ಗೋಳಿಕಟ್ಟೆ, ಅನಂತಾಡಿ ಗ್ರಾ.ಪಂ ಅಧ್ಯಕ್ಷರಾದ ಸುಜಾತ ಸುರೇಶ್, ಧರ್ಮಸ್ಥಳ ಯೋಜನಾ ಸಿಬ್ಬಂದಿಗಳಾದ ಪ್ರೇಮ ಗೋಳಿಕಟ್ಟೆ, ಹೇಮ ಶ್ರೀಧರ್ ಬಾಕಿಲ, ರಾಮಚಂದ್ರ ಮಾಡಾವು, ಶ್ರೀಧರ ಮಾಡಾವು, ಸೋಮನಾಥ ಸುಳ್ಯ, ಉಮೇಶ್ ಬಾಕಿಲ, ಶ್ರೀಧರ್ ಬಾಕಿಲ, ಮೋಹನ್ ಮಲ್ಲಿಪ್ಪಾಡಿ, ಸುಶೀಲ ಬಾಕಿಲ, ಕೊರಗಪ್ಪ ಪೂಜಾರಿ ಕುದ್ರಿಯ, ಚೆನ್ನಯ ಪೂಜಾರಿ ಬಾಕಿಲ, ಸುನಿಲ್ ಕಬಕ, ಅಕ್ಷತ್ ಬಾಕಿಲ, ಗಣೇಶ್ ಬಾಕಿಲ, ಯತಿನ್ ಬಾಕಿಲ ಮೊದಲಾದವರು ಉಪಸ್ಥಿತರಿದ್ದರು.