ಪುತ್ತೂರು: ಕಲ್ಲಿನ ಕೋರೆಯಲ್ಲಿ ಕಟ್ಟಿಂಗ್ ಮೆಷಿನ್‌ನಲ್ಲಿ ಕಲ್ಲನ್ನು ಕಟ್ಟಿಂಗ್ ಮಾಡುತ್ತಿರುವ ವೇಳೆ ಮೆಷಿನ್‌ನಿಂದ ಬೋಲ್ಟ್ ಬೇರ್ಪಟ್ಟು ಕಾರ್ಮಿಕನೋರ್ವನ ಹೊಟ್ಟೆಯ ಭಾಗಕ್ಕೆ ತಾಗಿ ಅಸ್ಸಾಂ ಮೂಲದ ಕಾರ್ಮಿಕ ಮೃತಪಟ್ಟಿರುವ ಘಟನೆ ಆ.20ರಂದು ಪಡುವನ್ನೂರು ಗ್ರಾಮದ, ಮೈಕುಲೆ ಎಂಬಲ್ಲಿ ನಡೆದಿದೆ.
ಅಸ್ಸಾಂ ರಾಜ್ಯದ ಉದಲ್ ಗುರಿ ಜಿಲ್ಲೆ ಕೊಯಿರಭಾರಿಯ ಜಬಾಂಗ ಪಥರ್ ಮನೆ ಬುದ್ರಮ್ ಬೊರೊ ಅವರ ಪುತ್ರ ಪ್ರದೀಫ್ ಬೊರೊ (27ವ.) ಮೃತರು.
ಕಲ್ಲು ಕಟ್ಟಿಂಗ್ ಮಾಡುವ ಮೆಷಿನ್‌ನಲ್ಲಿ ಕಲ್ಲನ್ನು ಕಟ್ಟಿಂಗ್ ಮಾಡುತ್ತಿರುವಾಗ ಅದರ ಪುಲ್ಲಿ(ರಾಟೆ) ಯು ಬೋಲ್ಟ್ ನಿಂದ ಬೇರ್ಪಟ್ಟು ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಪ್ರದೀಪ್ ಬೋರೋನ ಹೊಟ್ಟೆಯ ಬಲ ಭಾಗದ ಪಕ್ಕೆಲುಬುವಿಗೆ ಬಿದ್ದು, ಪಕ್ಕೆಲುಬುವಿಗೆ ತೀವ್ರ ಗಾಯಗೊಂಡಿದ್ದರು. ಅವರನ್ನು ಉಪರಿಚರಿಸಿ ಕೂಡಲೇ ಜೀಪಿನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ಅವರು ಮೃತ ಪಟ್ಟಿರುವುದಾಗಿ ತಿಳಿಸಿದ್ದರು. ಮೃತ ಸಹೋದರ ತಪೋನ್ ಬೋರೋ ನೀಡಿದ ದೂರಿನಂತೆ ಕೋರೆಯ ಮ್ಹಾಲಕರ ವಿರುದ್ಧ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಪ್ರದೀಫ್ ಬೋರೋ ಎರಡು ವಾರದ ಹಿಂದೆ ಊರಿನಿಂದ ಬಂದು ಕೇರಳದ ಕಣ್ಣೂರು ಎಂಬಲ್ಲಿ ಕೆಲಸ ಮಾಡುತ್ತಿದ್ದರು. ಪಡುವನ್ನೂರು ಗ್ರಾಮದ, ಮೈಕುಲೆ ಎಂಬಲ್ಲಿ ಹೊಸದಾಗಿ ಕಲ್ಲಿನ ಕೋರೆ ಕೆಲಸ ಮಾಡಲು ಪರವಾನಿಗೆ ದೊರೆತಿರುವುದರಿಂದ ಎರಡು ದಿನಗಳ ಹಿಂದ ಕೋರೆಯಲ್ಲಿ ಕಲ್ಲು ತೆಗೆಯುವ ಕೆಲಸ ಪ್ರಾರಂಭಗೊಂಡಿತ್ತು. ಕಣ್ಣೂರಿನ ಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಪ್ರದೀಪ್ ಬೋರೋ ಆ.19ರಂದು ಪಡುವನ್ನೂರಿನ ಮೈಕುಲೆ ಕೋರೆಗೆ ಕೆಲಸಕ್ಕಾಗಿ ಆಗಮಿಸಿದ್ದರು ಎಂದು ತಿಳಿದುಬಂದಿದೆ.