ಚರ್ಮದ ಆರೈಕೆಗೆ ಕಾಸ್ಮೆಟಿಕ್ ಉತ್ಪನ್ನಗಳಿಗಿಂತ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ. ಅದರಲ್ಲೂ ಟೊಮೆಟೊ ತ್ವಚೆಗೆ ಸಹಜ ಔಷಧಿಯಂತೆ ಕೆಲಸ ಮಾಡುತ್ತವೆ. ಪೌಷ್ಟಿಕಾಂಶ ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಟೊಮೆಟೊಗಳು ಚರ್ಮದ ತಾಜಾತನವನ್ನು ಹೆಚ್ಚಿಸುವುದರ ಜೊತೆಗೆ ಮೊಡವೆ, ಕಲೆ ಹಾಗೂ ಟ್ಯಾನಿಂಗ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ.
ಶ್ರೀಗಂಧ-ಟೊಮೆಟೊ ಪ್ಯಾಕ್
ಎರಡು ಚಮಚ ಶ್ರೀಗಂಧ ಪುಡಿಯಲ್ಲಿ ಟೊಮೆಟೊ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ, ಒಣಗಿದ ಬಳಿಕ ತೊಳೆಯಿರಿ. ಇದು ಚರ್ಮಕ್ಕೆ ತಾಜಾತನ ನೀಡುತ್ತದೆ ಹಾಗೂ ಕಲೆಗಳನ್ನು ಕಡಿಮೆ ಮಾಡುತ್ತದೆ.
ಸೌತೆಕಾಯಿ-ಟೊಮೆಟೊ ಪ್ಯಾಕ್
ಎಣ್ಣೆಯುಕ್ತ ಚರ್ಮವಿರುವವರಿಗೆ ಇದು ಅತ್ಯುತ್ತಮ. ಒಂದು ಟೊಮೆಟೊ ತಿರುಳಿಗೆ ಎರಡು ಚಮಚ ಸೌತೆಕಾಯಿ ತಿರುಳು ಹಾಗೂ ಒಂದು ಚಮಚ ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿ. 20 ನಿಮಿಷ ಹಚ್ಚಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಮುಲ್ತಾನಿ ಮಿಟ್ಟಿ-ಟೊಮೆಟೊ ಪ್ಯಾಕ್
ಮುಲ್ತಾನಿ ಮಿಟ್ಟಿಯಲ್ಲಿ ಟೊಮೆಟೊ ತಿರುಳನ್ನು ಬೆರೆಸಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ 15 ನಿಮಿಷ ಬಿಡಿ. ನಂತರ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಕ್ಲೀನ್ ಮಾಡಿ ಹೊಳಪನ್ನು ನೀಡುತ್ತದೆ.
ಒಣ ಚರ್ಮಕ್ಕೆ ಟೊಮೆಟೊ-ಆಲಿವ್ ಎಣ್ಣೆ ಪ್ಯಾಕ್
ಅರ್ಧ ಟೊಮೆಟೊ ರಸಕ್ಕೆ ಒಂದು ಚಮಚ ಆಲಿವ್ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿ. 20 ನಿಮಿಷಗಳ ಬಳಿಕ ತೊಳೆಯಿರಿ. ಇದು ಒಣ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ.
ಟೊಮೆಟೊ-ಅರಿಶಿನ ಪ್ಯಾಕ್
ಟೊಮೆಟೊ ತಿರುಳಿಗೆ ಒಂದು ಚಮಚ ಅರಿಶಿನ ಬೆರೆಸಿ ಪೇಸ್ಟ್ ಮಾಡಿ. ಇದನ್ನು ಹಚ್ಚಿದರೆ ಚರ್ಮಕ್ಕೆ ಹೊಳಪು ಬರುತ್ತದೆ ಹಾಗೂ ಟ್ಯಾನಿಂಗ್ ಕಡಿಮೆಯಾಗುತ್ತದೆ.
ಕಡಲೆಹಿಟ್ಟು ಹಿಟ್ಟು-ಟೊಮೆಟೊ ಪ್ಯಾಕ್
ಒಂದು ಚಮಚ ಕಡಲೆ ಹಿಟ್ಟಿಗೆ ಅರಿಶಿನ, ಜೇನುತುಪ್ಪ ಹಾಗೂ ಟೊಮೆಟೊ ರಸ ಬೆರೆಸಿ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ. ಇದರಿಂದ ಮುಖದಲ್ಲಿ ನೈಸರ್ಗಿಕ ಗ್ಲೋ ಮೂಡುತ್ತದೆ.