






ಪುತ್ತೂರು: ಖಾಸಗಿ ನ್ಯೂಸ್ ಚಾನೆಲ್ನ ಸಂಪಾದಕರೊಬ್ಬರು ಮಹೇಶ್ ಶೆಟ್ಟಿ ತಿಮರೋಡಿಯವರ ವಿರುದ್ಧ ಅಸವಿಂದಾನಿಕ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಪುತ್ತೂರು ಅಭಿನವ ಭಾರತ ಮಿತ್ರಮಂಡಳಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.


ನ್ಯೂಸ್ ಚಾನೆಲ್ನಲ್ಲಿ ನಿರೂಪಣೆಯಲ್ಲಿ ಸಂದರ್ಭ ಸಂದರ್ಶನ ನೀಡಿದ ಟಿವಿ ಮಾಧ್ಯಮವೊಂದರ ಸಂಪಾದಕ ರಾಕೇಶ್ ಶೆಟ್ಟಿ ಅವರು ಗಿರೀಶ್ ಮಟ್ಟಣ್ಣನವರು ಮತ್ತು ಮಹೇಶ್ ಶೆಟ್ಟಿ ತಿಮರೋಡಿಯವರನ್ನು ಅಸವಿಂಧಾನಿಕ ಪದಗಳಿಂದ ಅವಾಚ್ಯ ಶಬ್ದ ಗಳನ್ನು ಬಳಸಿ ಅತೀ ಕೆಟ್ಟ ರೀತಿಯಲ್ಲಿ ನಿಂದಿಸಿದ್ದಾರೆ. ಈಗಾಗಲೇ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರಿಗೆ ಸೌಜನ್ಯ ಹೋರಾಟದ ಮುಖಾಂತರ ಸಾಮಾಜಿಕ ನ್ಯಾಯದಡಿಯಲ್ಲಿ ಲಕ್ಷಾಂತರ ಅಭಿಮಾನಿಗಳು ಇದ್ದು ಅವರ ಮನಸ್ಸಿಗೆ ನೋವಾಗಿದೆ. ಮತ್ತು ರಾಕೇಶ್ ಶೆಟ್ಟಿ ಯವರ ಈ ನಿಂದನೆಗಳಿಗೆ ಅಭಿಮಾನಿಗಳು ಅಕ್ರೋಶಿತರಾಗಿದ್ದಾರೆ. ಸಮಾಜದ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿ ಕೊಟ್ಟು ಸಮಾಜದ ಶಾಂತಿ ಭಂಗಕ್ಕೆ ಹಾಗೂ ಸ್ವಾಸ್ಥ್ಯ ಕದಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದ್ದರಿಂದ ತಕ್ಷಣ ರಾಕೇಶ್ ಶೆಟ್ಟಿಯವರ ಮೇಲೆ ಕಾನೂನು ಕ್ರಮ ಕೈಗೊಂಡು ಕಠಿಣ ಕ್ರಮ ವಿಧಿಸಬೇಕೆಂದು ಮತ್ತು ಸಮಾಜದ ಶಾಂತಿಯನ್ನು ಕಾಪಾಡಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.





ಧನ್ಯ ಕುಮಾರ್ ಬೆಳಂದೂರು ಅವರ ನೇತೃತ್ವದಲ್ಲಿ ದೂರು ನೀಡುವಾಗ ಅಭಿನವ ಭಾರತ ಮಿತ್ರ ಮಂಡಳಿಯ ಪುರುಷೋತ್ತಮ ಕೋಲ್ಪೆ, ಹರಿಪ್ರಸಾದ್ ನೆಲ್ಲಿಕಟ್ಟೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.










