ಕುಂಬ್ರ: ಒಳಮೊಗ್ರು ಬೊಳ್ಳಾಡಿ ಸುಂದರಿ ಗೌಡರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಒಳಮೊಗ್ರು ಗ್ರಾಮದ ಬೊಳ್ಳಾಡಿ ಸುಂದರಿ ಗೌಡರವರ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಆ.29 ರಂದು ಕೊಲತ್ತಡ್ಕ ಶಿವಕೃಪಾ ಆಡಿಟೋರಿಯಂನಲ್ಲಿ ನಡೆಯಿತು.

ವಿದ್ವಾನ್ ಗೋಪಾಲಕೃಷ್ಣ ಗೌಡ ವೀರಮಂಗಿಲರವರು ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೊಳ್ಳಾಡಿ ಸುಂದರಿಯವರ ಪುತ್ರರು,ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು, ಅರಿಯಡ್ಕ ಚಿಕ್ಕಪ್ಪ ನಾೖಕ್‌, ಬೂಡಿಯಾರ್ ರಾಧಾಕೃಷ್ಣ ರೈ, ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸೇರಿದಂತೆ ಊರ ಪರವೂರ ಹಲವು ಮಂದಿ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಗಣ್ಯರು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು. ಮೃತರ ಪುತ್ರರಾದ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿಯವರು ಅತಿಥಿಗಳನ್ನು, ಕುಟುಂಬಸ್ಥರನ್ನು ಸ್ವಾಗತಿಸಿ ಸತ್ಕರಿಸಿದರು.

LEAVE A REPLY

Please enter your comment!
Please enter your name here