ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದು ಸಿಕ್ಕಿದ ಕೆಲವು ದಾಖಲೆಗಳು ಹಾಗೂ ನಗದನ್ನು ಒಳಗೊಂಡಿದ್ದ ಪರ್ಸ್ ಅನ್ನು ಅದರ ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಎಂಐಎಂ ಮೀಲಾದ್ ಕಮಿಟಿ ಸದಸ್ಯರಾದ ಹಂಝ ಆದರ್ಶನಗರ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆಲವು ದಿನಗಳ ಹಿಂದೆ ಹಂಝ ಅವರಿಗೆ ಈ ಪರ್ಸ್ ಬಿದ್ದು ಸಿಕ್ಕಿತ್ತು. ಇದರ ವಾರೀಸುದಾರ ಪತ್ತೆಗಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಯಬಿಟ್ಟಿದ್ದರು. ಈಗ ಪರ್ಸ್‌ನ ವಾರೀಸುದಾರರಾದ ಶ್ರೀರಾಮ್ ಧರ್ಮಸ್ಥಳ ಬಂದು ಪರ್ಸ್ ಪಡೆದುಕೊಂಡಿದ್ದಾರೆ.