ಕಾಣಿಯೂರು: ಬಾಲ್ಯದಲ್ಲಿಯೇ ಮಕ್ಕಳಲ್ಲಿ ಶಿಸ್ತು, ಸಂಘಟನೆ, ನಾಯಕತ್ವದ ಗುಣಗಳು ಮೂಡಿ ಬರಬೇಕೆಂಬ ಮಹಾದುದ್ದೇಶದಿಂದ ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆ ನರ್ಸರಿ ವಿಭಾಗದ ಪುಟಾಣಿಗಳಿಗೆ ಸ್ಕೌಟ್ ಅಂಡ್ ಗೈಡ್ಸ್ ,ಬುಲ್ ಬುಲ್, ಕಬ್ಸ್ ಗಳಂತೆ ‘ಬನ್ನಿಸ್’ ತರಬೇತಿಯನ್ನು ಆರಂಭಿಸಲಾಯಿತು.

ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಆಡಳಿತ ಅಧಿಕಾರಿ ವಸಂತ ರೈ ಕಾರ್ಕಳ ಪುಟಾಣಿಗಳೊಂದಿಗೆ ಮಾತನಾಡುತ್ತಾ ಬನ್ನಿಸ್ ತರಗತಿಯ ಮಹತ್ವವನ್ನು ವಿವರಿಸಿದ್ದರು. ಮುಖ್ಯಗುರುಗಳಾದ ನಾರಾಯಣ ಭಟ್ ಮತ್ತು ವಿನಯ ವಿ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಾಷ್ಟ್ರೀಯ ಶಟಲ್ ಬ್ಯಾಡ್ಮಿಂಟನ್ ತರಬೇತುದಾರ, ಆಟಗಾರ, ರಾಷ್ಟ್ರೀಯ ತೀರ್ಪುಗಾರರಾದ ಪಾಪನ್ ಕುಮಾರ್ ಉಪಸ್ಥಿತರಿದ್ದರು.
ಶಿಕ್ಷಕಿ ಕವಿತಾ ಎಚ್ ರೈಯವರು ‘ಬನ್ನಿ ಆಂಟಿ’ಯಾಗಿ ತರಬೇತಿಯನ್ನು ಪಡೆದುಕೊಂಡು ಪುಟಾಣಿಗಳಿಗೆ ಸೂಕ್ತ ತರಬೇತಿ ನೀಡಿದರು. ಹಿರಿಯ ಶಿಕ್ಷಕಿ ಸವಿತಾ ಕೆ ಮಾರ್ಗದರ್ಶನ ನೀಡಿದರು. ನರ್ಸರಿ ಪುಟಾಣಿಗಳು ಪ್ರಾರ್ಥಿಸಿದರು. ಕಬ್ ಮಾಸ್ಟರ್ ಸವಿತಾ ಎಸ್ ಕಾರ್ಯಕ್ರಮ ನಿರೂಪಿಸಿದರು. ಕಬ್ ಮಾಸ್ಟರ್ ರಚನ ಮತ್ತು ಪ್ಲಾಕ್ ಲೀಡರ್ ಸುಚೇತ ಪುಟಾಣಿಗಳನ್ನು ಅಭಿನಯ ಗೀತೆಯ ಮೂಲಕ ರಂಜಿಸಿದರು. ನರ್ಸರಿ ವಿಭಾಗದ ಶಿಕ್ಷಕಿ ಪ್ರತಿಭಾ ಸಹಕರಿಸಿದರು.